Select Your Language

Notifications

webdunia
webdunia
webdunia
webdunia

ಸೂರ್ಯಕುಮಾರ್‌ ಹೆಗಲಿಗೆ ಟಿ20 ನಾಯಕತ್ವ ಜವಾಬ್ದಾರಿ, ಕಾಪು ಮಾರಿಗುಡಿಗೆ ಪತ್ನಿ ಭೇಟಿ

Criceter SuryaKumar Yadav

Sampriya

ಉಡುಪಿ , ಸೋಮವಾರ, 3 ನವೆಂಬರ್ 2025 (16:03 IST)
Photo Credit X
ಉಡುಪಿ: ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಗಳು ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತುಅಭಿವೃದ್ಧಿ ಸಮಿತಿ ವತಿಯಿಂದ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಇನ್ನೂ ದೇವಸ್ಥಾನಕ್ಕೆ ಪ್ರಾಂಗಣದ ಮುಂದಿರುವ ಬೃಹತ್ ಕಲ್ಲಿನ ಕಂಬವನ್ನು ಸೇವೆ ರೂಪದಲ್ಲಿ ಸೂರ್ಯಕುಮಾರ್ ದಂಪತಿ ಕೊಟ್ಟಿದ್ದರು. ಭೇಟಿ ವೇಳೆ  ಕಂಬದ ಮುಂದೆ ದೇವಿಶಾ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇನ್ನೂ ಸೂರ್ಯಕುಮಾರ್ ಅವರು ಇದೀಗ ಟಿ20 ನಾಯಕರಾಗಿದ್ದು, ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದಾರೆ. 

ದೇವಿಶಾ ಶೆಟ್ಟಿ ಭರತನಾಟ್ಯ ಕಲಾವಿದೆಯಾಗಿದ್ದು ಮುಂಬೈನಲ್ಲಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಜುಲೈ 7, 2016 ರಂದು ಸೂರ್ಯ ದೇವಿಶಾ ಶೆಟ್ಟಿ ಅವರನ್ನು ವಿವಾಹವಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಬೆಡ್, ನಾಲ್ವರು ಫ್ರೆಂಡ್ಸ್.. ಬಾಯ್ಸ್ ಮೀರಿಸಿದ ಭಾರತ ಮಹಿಳಾ ಕ್ರಿಕೆಟಿಗರ ಸೆಲೆಬ್ರೇಷನ್