Select Your Language

Notifications

webdunia
webdunia
webdunia
webdunia

IND vs AUS: ಟೀಂ ಇಂಡಿಯಾಕ್ಕೆ ಇಂದೂ ಗೆಲ್ಲಲೇಬೇಕು

Suryakumar Yadav-Gautam Gambhir

Krishnaveni K

ಕ್ವೀನ್ಸ್ ಲ್ಯಾಂಡ್ , ಗುರುವಾರ, 6 ನವೆಂಬರ್ 2025 (08:38 IST)
ಕ್ವೀನ್ಸ್ ಲ್ಯಾಂಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು, ಸರಣಿ ಉಳಿಸಿಕೊಳ್ಳಲು ಇಂದು ಭಾರತಕ್ಕೆ ಗೆಲ್ಲಲೇಬೇಕಾದ ಒತ್ತಡವಿದೆ.

ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾಗೆ ಟಿ20 ಪಂದ್ಯ ಗೆಲ್ಲುವುದು ಪ್ರತಿಷ್ಠೆಯ ವಿಚಾರ. ಈಗಾಗಲೇ ಸರಣಿ1-1 ರಿಂದ ಸಮಬಲಗೊಂಡಿದೆ. ಇಂದು ಯಾವ ತಂಡ ಗೆಲ್ಲುತ್ತದೋ ಆ ತಂಡ ಸರಣಿ ಗೆಲ್ಲುವ ಆಸೆ ಜೀವಂತವಾಗಿಡಬಹುದು.

ಕಳೆದ ಪಂದ್ಯದಲ್ಲಿ ಅರ್ಷ್ ದೀಪ್ ಸಿಂಗ್ ರನ್ನು ಕಣಕ್ಕಿಳಿಸಿದ್ದು ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಈ ಪಂದ್ಯದಲ್ಲೂ ಅರ್ಷ್ ದೀಪ್ ಸಿಂಗ್ ಇರುವುದು ಖಚಿತ. ಆದರೆ ಭಾರತಕ್ಕೆ ದೊಡ್ಡ ತಲೆನೋವು ಬ್ಯಾಟಿಂಗ್.

ಆಸ್ಟ್ರೇಲಿಯಾದಂತಹ ತಂಡದ ವಿರುದ್ಧ ದೊಡ್ಡ ಮೊತ್ತ ಗಳಿಸಬೇಕು. ಆದರೆ ಟಾಪ್ ಆರ್ಡರ್ ಬ್ಯಾಟಿಗರು ದೊಡ್ಡ ಮೊತ್ತ ಗಳಿಸಲು ವಿಫಲರಾಗುತ್ತಿದ್ದಾರೆ. ಈ ಹುಳುಕು ಸರಿಪಡಿಸಿಕೊಂಡರೆ ಭಾರತ ಕ್ಲಿಕ್ ಆಗಲಿದೆ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.45 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳೇ ವಿಚಾರ ಹೇಳಿ ಹರ್ಲಿನ್ ಡಿಯೋಲ್ ಗೇ ಅಚ್ಚರಿ ನೀಡಿದ ಪ್ರಧಾನಿ ಮೋದಿ