ಮುಂಬೈ: ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ಮಹಿಳಾ ಕ್ರಿಕೆಟಿಗರು ಇತಿಹಾಸ ಬರೆದಿದ್ದಾರೆ. ಇನ್ನು, ಟ್ರೋಫಿ ಸ್ವೀಕರಿಸಲು ಹರ್ಮನ್ ಪ್ರೀತ್ ಕೌರ್ ಹೊಸ ಸ್ಟೈಲ್ ತೋರಿಸಿಕೊಟ್ಟಿದ್ದು ಇದು ಪುರುಷ ಕ್ರಿಕೆಟಿಗರಿಗೂ ಟ್ರೆಂಡ್ ಆಗಲಿದೆ. 
									
			
			 
 			
 
 			
					
			        							
								
																	ಭಾರತ ಪಂದ್ಯ ಗೆಲ್ಲುತ್ತಿದ್ದಂತೇ ಆಟಗಾರರ ಸಂಭ್ರಮ ಮೇರೆ ಮೀರಿತ್ತು. ಪರಸ್ಪರ ತಬ್ಬಿಕೊಂಡು ಖುಷಿಯಿಂದ ಕಣ್ಣೀರು ಹಾಕುತ್ತಾ ಗೆಲುವಿನ ಕೇಕೆ ಹಾಕಿದರು. ಮೈದಾನದಲ್ಲಿ ಆಟಗಾರರ ಸಂಭ್ರಮ ಮೇರೆ ಮೀರಿತ್ತು.
									
										
								
																	ಇದು ಮಹಿಳಾ ಕ್ರಿಕೆಟಿಗರಿಗೆ ಮೊದಲ ವಿಶ್ವಕಪ್ ಟ್ರೋಫಿ. ಹೀಗಾಗಿ ಇದನ್ನು ವಿಶೇಷವಾಗಿಯೇ ಸ್ವೀಕರಿಸಲು ಕ್ರಿಕೆಟಿಗರು ತೀರ್ಮಾನಿಸಿದ್ದರು. ಹರ್ಮನ್ ಪ್ರೀತ್ ಟ್ರೋಫಿ ಸ್ವೀಕರಿಸಲು ಬರುವಾಗಲೇ ಕೆಳಗೆ ನಿಂತಿದ್ದ ಜೆಮಿಮಾ ರೊಡ್ರಿಗಸ್ ಸೇರಿದಂತೆ ಪಂಜಾಬಿ ಸ್ಟೈಲ್ ಡ್ಯಾನ್ಸ್ ಮಾಡಿಕೊಂಡು ಬರುವಂತೆ ಸನ್ನೆ ಮಾಡಿದರು. ಹೀಗಾಗಿ ಹರ್ಮನ್ ಡ್ಯಾನ್ಸ್ ಮಾಡಿಕೊಂಡೇ ಟ್ರೋಫಿ ಹಿಡಿದು ನಿಂತಿದ್ದ ಜಯ್ ಶಾ ಬಳಿಗೆ ಬಂದರು.
									
											
							                     
							
							
			        							
								
																	ಟ್ರೋಫಿ ಸ್ವೀಕರಿಸಿದ ಬಳಿಕ ಹರ್ಮನ್ ಸಹ ಆಟಗಾರರನ್ನು ಪೋಡಿಯಂಗೆ ಕರೆದರು. ಈ ವೇಳೆ ಒಮ್ಮೆಟ್ರೋಫಿ ಕೊಡುವಂತೆ ಮತ್ತೆ ಕಿತ್ತುಕೊಳ್ಳುವಂತೆ ತಮಾಷೆ ಮಾಡಿ ಬಳಿಕ ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಗೆದ್ದ ಬಳಿಕ ನಿಧಾನವಾಗಿ ನಡೆದುಕೊಂಡು ಬಂದು ವಿಶಿಷ್ಟವಾಗಿ ಸಂಭ್ರಮಿಸಿದ್ದರು. ಇದೀಗ ಹರ್ಮನ್ ಇನ್ನೊಂದು ರೀತಿಯ ಸಂಭ್ರಮಾಚರಣೆ ಮಾಡಿ ಗಮನ ಸೆಳೆದಿದ್ದಾರೆ.