ನವದೆಹಲಿ: ಬಿಹಾರ ಚುನಾವಣೆ ಫಲಿತಾಂಶ ದಿನವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಲಿದ್ದು, ಈ ತಿಂಗಳ ಅಂತ್ಯದವರೆಗೂ ಫಾರಿನ್ ಟೂರ್ ನಲ್ಲಿರಲಿದ್ದಾರೆ.
ರಾಹುಲ್ ಗಾಂಧಿ ಪದೇ ಪದೇ ವಿದೇಶಕ್ಕೆ ತೆರಳುವ ಬಗ್ಗೆ ವಿಪಕ್ಷಗಳು ಆಗಾಗ ಟೀಕೆ ಮಾಡುತ್ತಿರುತ್ತವೆ. ಪ್ರಮುಖ ಸಮಯದಲ್ಲೇ ಅವರು ವಿದೇಶಕ್ಕೆ ಹೋಗುತ್ತಾರೆ ಎಂದು ಪಕ್ಷದೊಳಗೇ ಕೆಲವರಿಗೆ ಅಸಮಾಧಾನಗಳೂ ಇವೆ.
ಆದರೆ ಇದೆಲ್ಲದರ ನಡುವೆಯೂ ಇದೀಗ ಬಿಹಾರ ಚುನಾವಣೆ ಫಲಿತಾಂಶ ದಿನ ಅಂದರೆ ನವಂಬರ್ 14 ರಂದು ಅವರು ವಿದೇಶಕ್ಕೆ ತೆರಳಲಿದ್ದಾರೆ. ಅದಾದ ಬಳಿಕ ಮಾಸಂತ್ಯದವರಗೂ ಅವರು ಭಾರತಕ್ಕೆ ಮರಳಲ್ಲ. ಹೀಗಾಗಿ ನವಂಬರ್ ಕ್ರಾಂತಿಯ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ.
ನವಂಬರ್ 14 ಕ್ಕೆ ಅವರು ಫಿನ್ ಲ್ಯಾಂಡ್ ಗೆ ತೆರಳಲಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾರ ಭೇಟಿಗೂ ಅವಕಾಶವಿಲ್ಲ. ಪಕ್ಷದ ಜವಾಬ್ಧಾರಿಗಳನ್ನೆಲ್ಲಾ ಮಲ್ಲಿಕಾರ್ಜುನ ಖರ್ಗೆ ನಿರ್ವಹಿಸಲಿದ್ದಾರೆ.