ಪಾಟ್ನಾ: ಕರ್ನಾಟಕದ ಬಳಿಕ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಎಲ್ಲಾ ರಾಜ್ಯಗಳಲ್ಲೂ ಉಚಿತ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡುತ್ತಲೇ ಬಂದಿದೆ. ಇದೀಗ ಬಿಹಾರದಲ್ಲೂ ಇಂಡಿಯಾ ಒಕ್ಕೂಟದಿಂದ ಭರ್ಜರಿ ಉಚಿತ ಗ್ಯಾರಂಟಿ ಭರವಸೆ ನೀಡಲಾಗಿದೆ.
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್, ಆರ್ ಜೆಡಿ ನೇತೃತ್ವದ ಇಂಡಿಯಾ ಒಕ್ಕೂಟ ಜನರಿಗೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭರ್ಜರಿ ಉಚಿತ ಗ್ಯಾರಂಟಿಗಳನ್ನು ನೀಡುವ ಘೋಷಣೆ ಮಾಡಿದೆ. ಇದರಲ್ಲಿ ಮಹಿಳೆಯರಿಗೆ ಪ್ರತೀ ತಿಂಗಳು 2,500 ರೂ. ನೀಡುವ ಭರವಸೆ ಪ್ರಮುಖವಾಗಿದೆ.
ಇಂಡಿಯಾ ಒಕ್ಕೂಟದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದ್ದು ಇದರಲ್ಲಿ ಮಹಿಳೆಯರಿಗೆ ಮಾಸಿಕ 2,500 ರೂ., 25 ಲಕ್ಷ ರೂ.ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆ, ಭೂ ರಹಿತರಿಗೆ ಭೂಮಿ ಸೌಲಭ್ಯ ಸೇರಿದಂತೆ ಭರಪೂರ ಭರವಸೆಗಳ ಲಿಸ್ಟ್ ಇದೆ.
ಕರ್ನಾಟಕದಲ್ಲಿ ಉಚಿತ ಗ್ಯಾರಂಟಿಗಳಿಗೆ ಜನತೆ ಕಾಂಗ್ರೆಸ್ ಗೆ ವೋಟ್ ಹಾಕಿದಂತೆ ಬಿಹಾರದಲ್ಲೂ ಇಂಡಿಯಾ ಒಕ್ಕೂಟಕ್ಕೆ ಮತ ಹಾಕುತ್ತಾರಾ ಕಾದು ನೋಡಬೇಕಿದೆ.