ನವದೆಹಲಿ: ಬಿಹಾರ ಚುನಾವಣೆ ಸೋಲಿನ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲು ರಾಹುಲ್ ಗೆ ಆಘಾತ ತಂದಿತ್ತು. ಈ ಬಗ್ಗೆ ಅವರು ಒಂದು ಟ್ವೀಟ್ ಬಿಟ್ಟು ಯಾವುದೇ ಹೇಳಿಕೆ ನೀಡಿರಲಿಲ್ಲ. ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಅಜ್ಜಿ ಇಂದಿರಾ ಗಾಂಧಿಯವರ ಜನ್ಮ ಜಯಂತಿ ನಿಮಿತ್ತ ಸಮಾಧಿಗೆ ಭೇಟಿ ನೀಡಿದ್ದಾರೆ.
ಇಂದು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಜೊತೆ ರಾಹುಲ್ ಗಾಂಧಿ ಕೂಡಾ ಅಜ್ಜಿ ಸಮಾಧಿಗೆ ಭೇಟಿ ಕೊಟ್ಟು ಪೂಜೆ ಮಾಡಿದ್ದಾರೆ. ಇನ್ನು ಅಜ್ಜಿಯ ಜನ್ಮದಿನ ನಿಮಿತ್ತ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದಿರುವ ರಾಹುಲ್ ಗಾಂಧಿ, ಆಕೆಯ ಧೈರ್ಯ, ದೇಶಪ್ರೇಮವೇ ನನಗೆ ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯ ನೀಡುತ್ತದೆ ಎಂದಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶ ನವಂಬರ್ 14 ರಂದು ಹೊರಬಿದ್ದಿತ್ತು. ಕಾಂಗ್ರೆಸ್-ಆರ್ ಜೆಡಿ ನೇತೃತ್ವದ ಇಂಡಿಯಾ ಒಕ್ಕೂಟ ಸೋಲು ಕಂಡಿತ್ತು. ಆಡಳಿತಾರೂಢ ಎನ್ ಡಿಎ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.