ಬೆಂಗಳೂರು: ಮೋಸ ಮಾಡಿ ಗೆದ್ದ ಪ್ರಧಾನಿಗಳನ್ನು ನಾನು ಇದುವರೆಗೂ ನೋಡಿಲ್ಲ ಎಂದು ಮೋದಿಗೆ ಸಚಿವ ಸಂತೋಷ್ ಲಾಡ್ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೋಸ ಮಾಡಿ ಗೆದ್ದಿದೆ. ಮೋಸ ಮಾಡಿ ಚುನಾವಣೆ ಗೆಲ್ಲುವ ಪ್ರಧಾನಿಗಳನ್ನು ನಾನು ಇದುವರೆಗೆ ನೋಡಿಲ್ಲ ಎಂದು ಸಂತೋಷ್ ಲಾಡ್ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.
ದೇಶದಲ್ಲಿ ಬಾಂಬ್ ಸ್ಪೋಟವಾದಾಗ ಪ್ರಧಾನಿ ವಿದೇಶ ಪ್ರವಾಸ ಮಾಡುತ್ತಾರೆ. ಭೂತಾನ್ ರಾಜನ ಹುಟ್ಟುಹಬ್ಬ ಆಚರಿಸಲು ತೆರಳುತ್ತಾರೆ. ದೇಶದಲ್ಲಿ ಬಾಂಬ್ ಸ್ಪೋಟವಾದಾಗ ಅವರು ವಾಪಸ್ ಬರಬಹುದಿತ್ತು. ಆದರೆ ಅವರಿಗೆ ಭೂತಾನ್ ರಾಜನ ಹುಟ್ಟುಹಬ್ಬವೇ ಮುಖ್ಯವಾಗಿತ್ತು ಎಂದಿದ್ದಾರೆ.
ದೇಶದಲ್ಲಿ ಬಡವರಿಗೆ ಭೂಮಿ ಕೊಟ್ಟವರು ಇಂದಿರಾ ಗಾಂಧಿಯವರು. ಪಾಕಿಸ್ತಾನ ಭಾಗ ಮಾಡಿ ಬಾಂಗ್ಲಾದೇಶ ಮಾಡಿದ್ದು ಇಂದಿರಾ ಗಾಂಧಿಯವರೇ. ಅವರನ್ನು ಐರನ್ ಲೇಡಿ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೇ ಕರೆದಿದ್ದರು ಎಂದಿದ್ದಾರೆ.