Select Your Language

Notifications

webdunia
webdunia
webdunia
webdunia

ಬಿಹಾರ ಚುನಾವಣೆ ನ್ಯಾಯವಾಗಿ ನಡೆದಿಲ್ಲ ಎಂದ ರಾಹುಲ್ ಗಾಂಧಿ: ವಿದೇಶದಲ್ಲಿ ಕೂತು ನೆಪ ಹೇಳ್ತೀರಿ ಎಂದ ನೆಟ್ಟಿಗರು

Rahul Gandhi

Krishnaveni K

ಪಾಟ್ನಾ , ಶನಿವಾರ, 15 ನವೆಂಬರ್ 2025 (11:02 IST)
ಪಾಟ್ನಾ: ಬಿಹಾರ ಚುನಾವಣೆ ಫಲಿತಾಂಶ ಅಚ್ಚರಿ ತಂದಿದೆ. ಆರಂಭದಿಂದಲೂ ಇಲ್ಲಿ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಎಷ್ಟು ದಿನ ಈ ನೆಪ ಹೇಳ್ತೀರಿ ಎಂದಿದ್ದಾರೆ.

ಬಿಹಾರದಲ್ಲಿ ಚುನಾವಣೆ ಸೋಲುತ್ತಿದ್ದಂತೇ ಹಲವು ಕಾಂಗ್ರೆಸ್ ನಾಯಕರು ಇದು ಮತಗಳ್ಳತನದಿಂದ ಸೋಲಾಗಿದೆ ಎಂದಿದ್ದರು. ಕರ್ನಾಟಕದ ನಾಯಕರೇ ಈ ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ಟ್ವೀಟ್ ಮಾಡಿ ‘ಮಹಾಮೈತ್ರಿಕೂಟದಲ್ಲಿ ನಂಬಿಕೆ ಇಟ್ಟ ಬಿಹಾರದ ಲಕ್ಷಾಂತರ ಮತದಾರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಬಿಹಾರದಲ್ಲಿನ ಈ ಫಲಿತಾಂಶ ನಿಜಕ್ಕೂ ಆಘಾತಕಾರಿ. ಆರಂಭದಿಂದಲೂ ನ್ಯಾಯಯುತವಲ್ಲದ ಚುನಾವಣೆಯಲ್ಲಿ ನಾವು ಗೆಲ್ಲುವಲ್ಲಿ ವಿಫಲರಾಗಿದ್ದೇವೆ.

ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ. ಕಾಂಗ್ರೆಸ್ ಪಕ್ಷ ಮತ್ತು ಭಾರತ ಮೈತ್ರಿಕೂಟ ಈ ಫಲಿತಾಂಶವನ್ನು ಆಳವಾಗಿ ಪರಿಶೀಲಿಸುತ್ತವೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತವೆ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಪ್ರತೀ ಬಾರಿ ಇದೇ ಮಾತು ಹೇಳ್ತಿದ್ದೀರಾ, ನಿಮ್ಮ ಸೋಲಿಗೆ ನೆಪಗಳನ್ನು ಹುಡುಕುತ್ತಾ ಕೂರುತ್ತಿದ್ದೀರಿ. ನಿಮ್ಮ ನಾಯಕತ್ವವೂ ವಿಫಲವಾಗಿದೆ ಎಂದು ಒಪ್ಪಿಕೊಳ್ಳೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿ ವಿದೇಶದಲ್ಲಿ ಕುಳಿತುಕೊಂಡು ಟ್ವೀಟ್ ಮಾಡುತ್ತಿದ್ದರೆ ಏನು ಪ್ರಯೋಜನ ಎಂದಿದ್ದಾರೆ. ಮತ್ತೆ ಕೆಲವರು ವೋಟ್ ಚೋರಿ, ಸಂವಿಧಾನ ಎಂದು ಹೇಳುತ್ತಿದ್ದರೆ ಮುಂದಿನ ಚುನಾವಣೆಯಲ್ಲೂ ಇದೇ ಕತೆ ಗ್ಯಾರಂಟಿ ಎಂದಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಮತಗಳ್ಳತನ ಹೋರಾಟದ ಕತೆ ಏನಾಗಲಿದೆ