ಪಾಟ್ನಾ: ನವರಾತ್ರಿ ವೇಳೆ ಮೀನು ತಿಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹಿಂದೂಗಳ ವ್ಯಂಗ್ಯ ಮಾಡಿದರು. ಆಮೇಲೆ ಅವರು ಒಂದೇ ಒಂದು ಚುನಾವಣೆ ಗೆಲ್ಲಲಿಲ್ಲ. ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ಈಗ ತೇಜಸ್ವಿಗೆ ಟಾಂಗ್ ಕೊಡಲಾಗುತ್ತಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್ ಜೆಡಿ ಹೀನಾಯ ಸೋಲು ಕಂಡಿದೆ. ಇದಕ್ಕೆ ಮೊದಲು ಲೋಕಸಭೆ ಚುನಾವಣೆಯಲ್ಲೂ ಆರ್ ಜೆಡಿ ಸಾಧನೆ ಹೇಳಿಕೊಳ್ಳುವಂತಿರಲಿಲ್ಲ. ಇದಕ್ಕೆಲ್ಲಾ ಅಂದು ನವರಾತ್ರಿ ವೇಳೆ ಮೀನು ತಿಂದಿದ್ದು ಎಂದು ಕೆಲವರು ಈಗ ಹಳೇ ಪೋಸ್ಟ್ ವೈರಲ್ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ನವರಾತ್ರಿ ಎಂಬ ಕಾರಣಕ್ಕೆ ಕೇವಲ ನೀರು ಮಾತ್ರ ಸೇವಿಸುತ್ತಿದ್ದರು. ಇದಕ್ಕೆ ಟಾಂಗ್ ಕೊಡಲೇನೋ ಎಂಬಂತೆ ತೇಜಸ್ವಿ ಯಾದವ್ ಪ್ರಚಾರಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗುವಾಗ ಮೀನಿನ ಊಟ ಸೇವನೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದಕ್ಕೆ ಹಿಂದೂಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿಯಂತೂ ತೇಜಸ್ವಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದಿತ್ತು. ಇದೀಗ ಆ ಹಳೇ ಪೋಸ್ಟ್ ವೈರಲ್ ಮಾಡಿರುವ ಕೆಲವರು ನವರಾತ್ರಿ ವೇಳೆ ಹಿಂದೂ ಸಂಪ್ರದಾಯಕ್ಕೆ ಅವಮಾನ ಮಾಡಿದ ಬಳಿಕ ತೇಜಸ್ವಿಗೆ ತಮ್ಮ ಪಕ್ಷವನ್ನು ಒಂದೇ ಒಂದು ಚುನಾವಣೆಯಲ್ಲಿ ಗೆಲ್ಲಿಸಲು ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋತರು, ಈಗ ವಿಧಾನಸಭೆ ಚುನಾವಣೆಯಲ್ಲೂ ಸೋತಿದ್ದಾರೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.