ಜಮ್ಮು ಕಾಶ್ಮೀರ: ದೆಹಲಿ ಮಾದರಿಯಲ್ಲೇ ಕಾಶ್ಮೀರದ ನೌಗಾಮ್ ಪೊಲೀಸ್ ಸ್ಟೇಷನ್ ಬಳಿ ಸ್ಪೋಟ ಸಂಭವಿಸಿದ್ದು ಪೊಲೀಸರು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದು 27 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಐದು ದಿನಗಳ ಹಿಂದೆ ದೆಹಲಿಯಲ್ಲಿ ಕಾರು ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಸಂಬಂಧ ಇನ್ನೂ ತನಿಖೆ ನಡೆಯುತ್ತಿದೆ. ಇದರ ನಡುವೆಯೇ ಈಗ ನೌಗಾಮ್ ಠಾಣೆಯಲ್ಲಿ ಸ್ಪೋಟ ಸಂಭವಿಸಿದೆ. ಈ ಬಾರಿ ಫರೀದಾಬಾದ್ ನಲ್ಲಿ ಉಗ್ರರಿಂದ ವಶಕ್ಕೆ ಪಡೆದ ಸ್ಪೋಟಕಗಳನ್ನು ಸೀಝ್ ಮಾಡಿ ಸಂಗ್ರಹಿಸಿಡಲಾಗಿತ್ತು. ಈ ಸ್ಪೋಟಕಗಳನ್ನು ಪರಿಶೀಲಿಸುವಾಗ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ.
ವಿಶೇಷವೆಂದರೆ ತಜ್ಞರ ತಂಡವೇ ಪರಿಶೀಲನೆ ನಡೆಸುತ್ತದೆ. ಹಾಗಿರುವಾಗ ಇಂತಹ ಪ್ರಮಾದ ಹೇಗಾಯ್ತು ಎನ್ನುವುದರ ಬಗ್ಗೆ ಅನುಮಾನವಿದೆ. ನಿನ್ನೆ ರಾತ್ರಿ 11.20 ರ ಸುಮಾರಿಗೆ ಅಮೋನಿಯಂ ನೈಟ್ರೇಟ್ ಸ್ಪೋಟಕ ಸ್ಪೋಟಿಸಿದೆ.
ಇದರಿಂದಾಗಿ ಪೊಲೀಸ್ ಠಾಣೆ ಮತ್ತು ಅಕ್ಕಪಕ್ಕದ ನಿವಾಸಿಗಳಿಗೂ ಸಾವು-ನೋವುಗಳಾಗಿವೆ. ಕಟ್ಟಡಗಳಿಗೂ ಹಾನಿಯಾಗಿದೆ. ಟೆರರ್ ವೈದ್ಯ ಗ್ಯಾಂಗ್ ನ್ನು ಸೆರೆಹಿಡಿಯಲು ಇದೇ ನೌಗಾಮ್ ಠಾಣೆಯ ಪೊಲೀಸರೇ ಪ್ರಮುಖ ಪಾತ್ರ ವಹಿಸಿದ್ದು. ಇದೀಗ ಅದೇ ಪೊಲೀಸ್ ಠಾಣೆಯ ಬಳಿಯೇ ಸ್ಪೋಟ ಸಂಭವಿಸಿರುವುದು ಅನುಮಾನ
ಹುಟ್ಟು ಹಾಕಿದೆ.