ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಏನಾಗಲಿದೆ ಎಂಬುದನ್ನು ಗೃಹಸಚಿವ ಅಮಿತ್ ಶಾ ಮೊದಲೇ ಭವಿಷ್ಯ ನುಡಿದಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ.
ಬಿಹಾರ ಚುನಾವಣೆ ಪ್ರಚಾರದ ವೇಳೆ ಅಮಿತ್ ಶಾ ನವಂಬರ್ 14 ರಂದು ಫಲಿತಾಂಶ ಏನಾಗುತ್ತದೆ ಎಂದು ನಾನು ನಿಮಗೆ ಹೇಳಬೇಕಾ? ಹೇಳಬೇಕು ಎಂದರೆ ಎಲ್ಲರೂ ಜೋರಾಗಿ ಕೂಗಿ ಎಂದು ಕೇಳಿದ್ದರು. ಇದಕ್ಕೆ ಜನರೂ ಹೌದು ಎಂದಿದ್ದರು.
ಆಗ ಅಮಿತ್ ಶಾ 14 ನೇ ತಾರೀಖಿನಿಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಶುರುವಾಗುತ್ತದೆ. ಮಧ್ಯಾಹ್ನ 1 ಗಂಟೆ ಆಗುವ ವೇಳೆಗೆ ಎನ್ ಡಿಎ ಭರ್ಜರಿ ಗೆಲುವು ಸಾಧಿಸುತ್ತದೆ, ರಾಹುಲ್, ತೇಜಸ್ವಿ ಇಬ್ಬರೂ ಧೂಳೀಪಟವಾಗಿರುತ್ತಾರೆ ಎಂದು ಅಮಿತ್ ಶಾ ಹೇಳಿದ್ದರು.
ಅವರ ಹೇಳಿಕೆ ಈಗ ವೈರಲ್ ಆಗಿದೆ. ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಅಮಿತ್ ಶಾ ಅಷ್ಟು ವಿಶ್ವಾಸ ಹೊಂದಿದ್ದರು. ಇದಕ್ಕೇ ಅವರನ್ನು ಚುನಾವಣಾ ಚಾಣಕ್ಯ ಎನ್ನುವುದು ಎಂದು ಬಿಜೆಪಿ ಹಿಂಬಾಲಕರು ಹೊಗಳುತ್ತಿದ್ದಾರೆ.