ಪಾಟ್ನಾ: ಬಿಹಾರದಲ್ಲಿ ಈ ಬಾರಿ ಮಹಾಘಟಬಂಧನ ಮೈತ್ರಿ ಕೂಟದ ಸಿಎಂ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್ ಸ್ಥಿತಿ ಶಾಕಿಂಗ್ ಆಗಿದೆ.
ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಈ ಬಾರಿ ಚುನಾವಣೆ ಗೆದ್ದು ಸಿಎಂ ಆಗುವ ಕನಸು ಕಂಡಿದ್ದರು. ಆದರೆ ಈಗ ಅವರ ಪಕ್ಷ ಬಿಡಿ ಅವರೇ ಸೋಲುವ ಭೀತಿ ಕಾಣುತ್ತಿದೆ. ತೇಜಸ್ವಿ ಯಾದವ್ ರಾಘೋಪುರನಲ್ಲಿ ಸ್ಪರ್ಧಿಸಿದ್ದು, ಇಲ್ಲಿ 3,000 ಕ್ಕೂ ಹೆಚ್ಚು ಮತಗಳಿಂದ ಈಗ ಅವರು ಹಿನ್ನಡೆಯಲ್ಲಿದ್ದಾರೆ.
ಇಲ್ಲಿ ಬಿಜೆಪಿಯ ಸತೀಶ್ ಕುಮಾರ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಒಂದು ವೇಳೆ ತೇಜಸ್ವಿ ಸೋತರೆ ಅದು ಮಹಾಘಟಬಂಧನ ಮೈತ್ರಿಕೂಟಕ್ಕೆ ತೀವ್ರ ಮುಖಭಂಗವಾಗಲಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಅಂತರ ಹೆಚ್ಚಿಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.
ಬಿಹಾರ ವಿಧಾನಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಈಗಿನ ಟ್ರೆಂಡ್ ಪ್ರಕಾರ ಎನ್ ಡಿಎ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಎನ್ ಡಿಎ 189 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್-ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ 50 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಮತ್ತೊಮ್ಮೆ ಸೋತ ರಾಹುಲ್ ಗಾಂಧಿಗೆ ಅಭಿನಂದನೆ, ಕರ್ನಾಟಕದಲ್ಲೂ ಹೀಗೇ ಆಗುತ್ತೆ: ಆರ್ ಅಶೋಕ್