ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಆಡಳಿತಾರೂಢ ಎನ್ ಡಿಎ ಮೈತ್ರಿ ಕೂಟ ಆರಂಭಿಕ ಮುನ್ನಡೆಯಲ್ಲಿದೆ.
ಬಿಹಾರದಲ್ಲಿ ಒಟ್ಟು 243 ಸ್ಥಾನಗಳಿವೆ. ಕಳೆದ ಬಾರಿ ಎನ್ ಡಿಎ 125 ಸ್ಥಾನ, ಆರ್ ಜೆಡಿ 75 ಮತ್ತು ಕಾಂಗ್ರೆಸ್ 19 ಸೀಟ್ ಸ್ಥಾನ ಪಡೆದಿದ್ದವು. ಬಹುಮತಕ್ಕೆ 122 ಸ್ಥಾನ ಬೇಕಾಗಿದೆ. ಈ ಬಾರಿ ಎಕ್ಸಿಟ್ ಪೋಲ್ ಫಲಿತಾಂಶಗಳು ಮತ್ತೆ ಎನ್ ಡಿಎ ಮೈತ್ರಿ ಕೂಟವೇ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿತ್ತು.
ಇದೀಗ ಆರಂಭಿಕ ಟ್ರೆಂಡ್ ಗಮನಿಸಿದರೆ ಎಕ್ಸಿಟ್ ಪೋಲ್ ನಿರೀಕ್ಷೆಯಂತೇ ಸಾಗುತ್ತಿದೆ. ಈಗಿನ ವರದಿ ಪ್ರಕಾರ ಎನ್ ಡಿಎ 35 ಸ್ಥಾಗಳಲ್ಲಿ ಮಹಾಘಟಬಂಧನ 18 ಸ್ಥಾನಗಳಲ್ಲಿ ಮತ್ತು ಇತರರು 2 ಸ್ಥಾಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಆದರೆ ಇದು ಆರಂಭಿಕ ಟ್ರೆಂಡ್ ಅಷ್ಟೇ. ಇದು ಬದಲಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ಆದರೆ ಸದ್ಯದ ಮಟ್ಟಿಗೆ ಅಂಚೆ ಮತ ಎಣಿಕೆಯಲ್ಲೂ ಎನ್ ಡಿಎಯೇ ಮುನ್ನಡೆಯಲ್ಲಿದೆ.