Select Your Language

Notifications

webdunia
webdunia
webdunia
webdunia

ಎಲ್ಲ ಜಮ್ಮು ಕಾಶ್ಮೀರಿ ಪ್ರಜೆಗಳು ಭಯೋತ್ಪಾದಕರಲ್ಲ: ಸಿಎಂ ಓಮರ್ ಅಬ್ದುಲ್ಲಾ

Jammu and Kashmir CM Omar Abdullah

Sampriya

ಜಮ್ಮು ಮತ್ತು ಕಾಶ್ಮೀರ , ಗುರುವಾರ, 13 ನವೆಂಬರ್ 2025 (16:17 IST)
Photo Credit X
ಜಮ್ಮು (ಜಮ್ಮು ಮತ್ತು ಕಾಶ್ಮೀರ): ದೆಹಲಿಯ ಕೆಂಪು ಕೋಟೆ ಬಳಿ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಅವರು ಕೆಲವು ಮಂದಿ ಇದರಲ್ಲಿ ಭಾಗಿಯಾಗಿದ್ದು, ಆದರೆ ಪ್ರತಿ ಜಮ್ಮು ಕಾಶ್ಮೀರಿಯನ್ನು ಭಯೋತ್ಪಾದಕರಂತೆ ಬಿಂಬಿಸುವುದು ಸರಿಯಲ್ಲ ಎಂದರು.

ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಗುರುವಾರ ನವದೆಹಲಿಯ ಕೆಂಪು ಕೋಟೆಯ ಬಳಿ ಕನಿಷ್ಠ 12 ಜನರನ್ನು ಬಲಿತೆಗೆದುಕೊಂಡ ಸ್ಫೋಟವನ್ನು ಖಂಡಿಸಿದ್ದಾರೆ.

‌"ಈ ಪ್ರದೇಶದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಹಾಳುಮಾಡಿರುವವರು ಕೆಲವೇ ಜನರು" ಮತ್ತು ಪ್ರತಿ ಕಾಶ್ಮೀರಿಯನ್ನು ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದರು.

 "ಇದು ಅತ್ಯಂತ ಖಂಡನೀಯ. ಇಂತಹ ಕ್ರೂರವಾಗಿ ಅಮಾಯಕರ ಹತ್ಯೆಯನ್ನು ಯಾವುದೇ ಧರ್ಮ ಸಮರ್ಥಿಸಲು ಸಾಧ್ಯವಿಲ್ಲ. ತನಿಖೆ ಮುಂದುವರಿಯುತ್ತದೆ, ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು - ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ನಿವಾಸಿ ಭಯೋತ್ಪಾದಕ ಅಥವಾ ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿರುವುದಿಲ್ಲ. ಕೆಲವೇ ಮಂದಿ ಶಾಂತಿ ಮತ್ತು ಸಹೋದರತ್ವವನ್ನು ಹಾಳುಮಾಡಿದ್ದಾರೆ ಎಂದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಾಹಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸುರಂಗ ರಸ್ತೆ ಭಂಡತನದ ನಿರ್ಧಾರ: ಪಿ.ಸಿ.ಮೋಹನ್