ನವದೆಹಲಿ: ದೆಹಲಿ ಕಾರು ಬಾಂಬ್ ಸ್ಪೋಟದ ಬಳಿಕ ಟೆರರ್ ವೈದ್ಯರ ಗ್ಯಾಂಗ್ ಜಾತಕವೆಲ್ಲಾ ಬಯಲಾಗಿದೆ. ಅಷ್ಟಕ್ಕೂ ಭಯೋತ್ಪಾದನಾ ಚಟುವಟಿಕೆಗೆ ವೈದ್ಯರನ್ನೇ ಬಳಸುವುದು ಯಾಕೆ? ಇಲ್ಲಿದೆ ಶಾಕಿಂಗ್ ಕಾರಣ.
ದೆಹಲಿ ಸ್ಪೋಟಕ್ಕೆ ಮುನ್ನ ಹರ್ಯಾಣದಲ್ಲಿ ಸ್ಪೋಟಕದೊಂದಿಗೆ ಬಂಧಿತರಾಗಿದ್ದವರೂ ಇಬ್ಬರು ಟೆರರ್ ವೈದ್ಯರು. ದೆಹಲಿಯಲ್ಲಿ ಸ್ಪೋಟ ನಡೆಸಿದ್ದವನೂ ವೈದ್ಯನೇ. ಶಸ್ತ್ರಾಸ್ತ್ರ ಸಂಗ್ರಹಣೆ ಆರೋಪದಲ್ಲಿ ಬಂಧಿತರಾದವರೂ ವೈದ್ಯರೇ.
ವೈದ್ಯಕೀಯ ಸೇವೆಯಂತಹ ಇನ್ನೊಬ್ಬರ ಜೀವ ಉಳಿಸುವ ವೃತ್ತಿ ಶಿಕ್ಷಣ ಪಡೆಯುವ ಇವರು ಈ ರೀತಿಯ ಕೃತ್ಯಕ್ಕೆ ಇಳಿಯುವಂತಹ ಮತಾಂಧ ಮನಸ್ಥಿತಿ ಬೆಳೆಸಿಕೊಂಡಿರುವುದು ಅಚ್ಚರಿಯಾದರೆ, ಇವರನ್ನೇ ಭಯೋತ್ಪಾದಕ ಸಂಘಟನೆಗಳು ಟಾರ್ಗೆಟ್ ಮಾಡಿರುವುದಕ್ಕೂ ಕಾರಣವಿದೆ.
ವೈದ್ಯರಿಗಾದರೆ ದೇಶದ ಯಾವುದೇ ಭಾಗದಲ್ಲಿ ಮನೆ ಸುಲಭವಾಗಿ ಸಿಗುತ್ತದೆ. ರಾತ್ರೋ ರಾತ್ರಿ ಹೊತ್ತಲ್ಲದ ಹೊತ್ತಿನಲ್ಲಿ ಓಡಾಟ ನಡೆಸಿದರೂ ಯಾರಿಗೂ ಸಂಶಯ ಬರುವುದಿಲ್ಲ. ಅವರಿಗೆ ಸ್ಪೋಟಕಗಳು ಸುಲಭವಾಗಿ ಸಿಗುತ್ತದೆ. ವೈದ್ಯ ಎನ್ನುವ ಕಾರಣಕ್ಕೆ ಪೊಲೀಸ್ ತಪಾಸಣೆಗಳಿಂದಲೂ ವಿನಾಯ್ತಿ ಸಿಗುತ್ತದೆ. ಈ ಕಾರಣಕ್ಕೆ ಭಯೋತ್ಪಾದಕ ಸಂಘಟನೆಗಳು ವೈದ್ಯರನ್ನೇ ತನ್ನ ಸ್ಲೀಪರ್ ಸೆಲ್ ಗೆ ಬಳಸಿಕೊಳ್ಳುತ್ತದೆ ಎನ್ನಲಾಗಿದೆ.