ಬೆಂಗಳೂರು: ಬಿಹಾರ ಚುನಾವಣೆ ಗೆಲ್ಲಲು ಬಿಜೆಪಿಯೇ ಬಾಂಬ್ ಬ್ಲಾಸ್ಟ್ ಮಾಡಿರಬಹುದು ಎಂಬ ಕಾಂಗ್ರೆಸ್ ನಾಯಕ, ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆ ನೀಡಲು ನಾಚಿಕೆಯಾಗಲ್ವಾ ಎಂದಿದ್ದಾರೆ.
ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವಾಗ ಜಮೀರ್ ಅಹ್ಮದ್, ದೆಹಲಿ ಸ್ಪೋಟವನ್ನು ಬಿಜೆಪಿಯೇ ಮಾಡಿಸಿರಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಿಹಾರದಲ್ಲಿ ಒಂದನೇ ಹಂತದ ಚುನಾವಣೆ ನಡೆದಿತ್ತು. ಎರಡನೇ ಹಂತದ ಚುನಾವಣೆ ಸಂದರ್ಭದಲ್ಲಿಯೇ ಸ್ಪೋಟ ಹೇಗೆ ನಡೆಯಿತು ಎಂದು ನಾಲಿಗೆ ಹರಿಬಿಟ್ಟಿದ್ದರು.
ಬಿಹಾರದಲ್ಲಿ ಚುನಾವಣೆ ಇದ್ದಿದ್ದು 11 ಕ್ಕೆ. ಬಾಂಬ್ ಬ್ಲಾಸ್ಟ್ ಆಗಿದ್ದು 10ಕ್ಕೆ. ಇದು ಹೇಗಾಯ್ತು? ಇದರಲ್ಲಿ ರಾಜಕೀಯ ಕೈವಾಡವಿದೆ ಎಂದು ಕೇಳಿಬರುತ್ತಿದೆ. ಇದಕ್ಕೆಲ್ಲಾ ಅಮಿತ್ ಶಾ ಉತ್ತರ ಕೊಡಬೇಕು ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಏನೇ ರಾಜಕೀಯವಿರಲಿ, ದೇಶದ ಭದ್ರತೆ ವಿಚಾರದಲ್ಲಿ ಇಂತಹ ಹೇಳಿಕೆ ನೀಡಲು ನಾಚಿಕೆಯಾಗಲ್ವಾ? ಮೊದಲು ನಿಮ್ಮ ಬಾಂಧವರನ್ನೇ ಪ್ರಶ್ನೆ ಮಾಡಿ. ನಿಮ್ಮ ಪ್ರಕಾರ ಬೇರೆ ದಿನಗಳಲ್ಲಿ ಬಾಂಬ್ ಬ್ಲಾಸ್ಟ್ ಆದರೆ ಸಮಸ್ಯೆಯಿಲ್ಲ. ಈಗ ಆಗಿದ್ದೇ ಸಮಸ್ಯೆ. ಅಷ್ಟಕ್ಕೂ ಈಗ ಸಿಕ್ಕಿಬಿದ್ದ ಟೆರರ್ ವೈದ್ಯರಿಗೆ ಬಿಜೆಪಿಯೇ ಟ್ರೈನಿಂಗ್ ನೀಡಿತ್ತಾ? ಹೇಳಿಕೆ ನೀಡುವುದಕ್ಕೂ ಅರ್ಥ ಬೇಡ್ವಾ ಎಂದು ಕಿಡಿ ಕಾರಿದ್ದಾರೆ.