Select Your Language

Notifications

webdunia
webdunia
webdunia
webdunia

ಗುಮ್ಮಾಟಾಕಾರದ ಅಂಗನವಾಡಿ ನೋಟಕ್ಕೆ ಫಿದಾ ಆದ ಸಚಿವ ಪ್ರಿಯಾಂಕ್ ಖರ್ಗೆ

Bengaluru Doddaballapur Anganawadi

Sampriya

ಬೆಂಗಳೂರು , ಬುಧವಾರ, 12 ನವೆಂಬರ್ 2025 (19:13 IST)
Photo Credit X
ಬೆಂಗಳೂರು:  ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮ ಪಂಚಾಯತಿಯು ಸ್ವಂತ ಸಂಪನ್ಮೂಲ ಹಾಗೂ ಸಿಎಸ್‌ ಆರ್‌ ಅನುದಾನದಲ್ಲಿ ನಿರ್ಮಿಸಿದ ಗುಮ್ಮಾಟಾಕಾರದ ಅಂಗನವಾಡಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಫಿದಾ ಆಗಿದ್ದಾರೆ. 

ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 

ಗ್ರಾಮ ಪಂಚಾಯಿತಿಗಳು ಕ್ರೀಯಾಶೀಲತೆಯನ್ನು ಅಳವಡಿಸಿಕೊಂಡಾಗ, ತಮ್ಮ ಊರಿನ ಬಗ್ಗೆ ಅಗತ್ಯತೆಗಳನ್ನು ಅರಿತುಕೊಂಡಾಗ ಇಂತಹ ವಿಶಿಷ್ಟ ಕಾರ್ಯಗಳು ಸಾಧ್ಯವಾಗುತ್ತವೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮ ಪಂಚಾಯತಿಯು ಸ್ವಂತ ಸಂಪನ್ಮೂಲ ಹಾಗೂ ಸಿಎಸ್‌ ಆರ್‌ ಅನುದಾನದಲ್ಲಿ ಮಕ್ಕಳಿಗೆ ಆಕರ್ಷಕ ವಾತಾವರಣವನ್ನು ಒದಗಿಸುವ ಸಲುವಾಗಿ ಗುಮ್ಮಟಾಕಾರದ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿದೆ.

ಈ ಗುಮ್ಮಟಾಕಾರದ ಅಂಗನವಾಡಿ ಕಟ್ಟಡವು ಈಗ ಮಕ್ಕಳಿಗಷ್ಟೇ ಅಲ್ಲ, ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

ಗ್ರಾಮ ಆಡಳಿತವು ಸೃಜನಶೀಲತೆ, ಕ್ರಿಯಾಶೀಲತೆ, ಇಚ್ಛಾಶಕ್ತಿ ಈ ಮೂರು ಗುಣಗಳನ್ನು ಅಳವಡಿಸಿಕೊಂಡಾಗ ಇಂತಹ ವಿಶೇಷಗಳನ್ನು ಸಾಧ್ಯವಾಗಿಸಬಹುದು.



Share this Story:

Follow Webdunia kannada

ಮುಂದಿನ ಸುದ್ದಿ

ನಡು ರಸ್ತೆಯಲ್ಲಿ ಖಾಸಗಿ ಅಂಗ ಪ್ರದರ್ಶಿಸಿದವನಿಗೆ ಪೊರಕೆ ಸೇವೆ ಮಾಡಿದ ಮಹಿಳೆ video