ಚೆನ್ನೈ: ನಡು ರಸ್ತೆಯಲ್ಲಿ ಖಾಸಗಿ ಅಂಗ ತೋರಿಸಿ, ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಗೆ ಮಹಿಳೆಯೊಬ್ಬರು ಪೊರಕೆ ಸೇವೆ ಮಾಡಿದ ಘಟನೆ ಚೆನ್ನೈನಲ್ಲಿ ವರದಿಯಾಗಿದೆ.
ಈ ವಿಡಿಯೋವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಮಾಡಿದ್ದಾರೆ.
ಈ ಘಟನೆ ಚೆನ್ನೈನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಳಗ್ಗಿನ ಜಾವ ಮಾರ್ಗವನ್ನು ಗುಡಿಸುತ್ತಿದ್ದ ಮುನ್ಸಿಪಾಲಿಟಿ ಮಹಿಳೆಗೆ ಬೈಕ್‌ನಲ್ಲಿದ್ದ ವ್ಯಕ್ತಿ ಪ್ಯಾಂಟ್ ಅನ್ನು ತೆಗೆದು ಖಾಸಗಿ ಅಂಗವನ್ನು ತೋರಿಸಿದ್ದಾನೆ.
ಮೊದಲು ಗಮನಿಸದ ಮಹಿಳೆ, ಮತ್ತೇ ನೋಡಿದಾಗ ವ್ಯಕ್ತಿಯ ವಿಕೃತಿಯನ್ನು ಕಂಡು ಕೋಪಗೊಂಡಿದ್ದಾಳೆ.
ಕೈಯಲ್ಲಿದ್ದ ಪೊರಕೆಯಲ್ಲೇ ಆತನಿಗೆ ಬಿಸಿ ಏಟು ನೀಡಿದ್ದಾಳೆ. ಕೂಡಲೇ ಬೈಕ್ ಅನ್ನು ಸ್ಟಾರ್ಟ್ ಮಾಡಿ, ಅಲ್ಲಿಂದ್ದ ಪಲಾಯನ ಮಾಡಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮಹಿಳೆಯ ದಿಟ್ಟ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಹಾಗೂ ವಿಕೃತಿ ಮೆರೆದ ವ್ಯಕ್ತಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ವ್ಯಕ್ತವಾಗಿದೆ