ನವದೆಹಲಿ: ದೆಹಲಿ ಸ್ಪೋಟದ ಸಂಚಿನ ರೂವಾರಿಗಳಲ್ಲಿ ಒಬ್ಬಾಕೆಯಾಗಿರುವ ಟೆರರ್ ಗ್ಯಾಂಗ್ ವೈದ್ಯೆ ಡಾ ಶಾಹೀನ್ ಕತೆ ಒಂದಾ ಎರಡಾ.. ಈಕೆಯ ಪ್ಲ್ಯಾನ್ ಭಯಂಕರವಾಗಿತ್ತು ಎಂಬುದು ಈಗ ಬಯಲಾಗುತ್ತಿದೆ.
ಡಾ ಶಾಹೀನ್ ಗೆ ಜೈಶ್ ಇ ಮೊಹಮ್ಮದ್ ಸಂಘಟನೆಯೊಂದಿಗೆ ನೇರ ಸಂಪರ್ಕವಿತ್ತು ಎನ್ನುವುದು ಈಗ ಬಯಲಾಗಿದೆ. ಉಗ್ರ ನಾಯಕ ಮಸೂದ್ ಅಜರ್ ಕುಟುಂಬದ ಸಂಬಂಧಿ, ಮಹಿಳಾ ನಾಯಕಿಯೊಂದಿಗೆ ನೇರ ಸಂಪರ್ಕ ಹೊಂದಿದ್ದಳು.
ಡಾ ಶಾಹೀನ್ ಳನ್ನು ಭಾರತದಲ್ಲಿ ಜೈಶ್ ಸಂಘಟನೆಯ ಮಹಿಳಾ ವಿಭಾಗಕ್ಕೆ ನಾಯಕಿಯಾಗಿ ನೇಮಕ ಮಾಡಲು ಯೋಜನೆ ಹಾಕಲಾಗಿತ್ತು. ಈಕೆಯನ್ನು ಬಂಧಿಸುವಾಗ ಈಕೆಯ ಕಾರಿನಲ್ಲೂ ಸ್ಪೋಟಕಗಳು ಪತ್ತೆಯಾಗಿದ್ದವು.
ಜೈಶ್ ಸಂಘಟನೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಈಕೆ ಭಾರತದಲ್ಲಿ ಮಹಿಳಾ ಜಿಹಾದಿಗಳನ್ನು ನೇಮಕ ಮಾಡುವ ಕೆಲಸವನ್ನು ಆಕೆಗೆ ಒಪ್ಪಿಸಲಾಗಿತ್ತು. ಹೀಗಾಗಿ ಈ ಕೃತ್ಯಗಳಲ್ಲಿ ಆಕೆ ತೊಡಗಿಸಿಕೊಂಡಿದ್ದಳು ಎಂದು ತಿಳಿದುಬಂದಿದೆ.