ನವದೆಹಲಿ: ದೆಹಲಿ ಬಾಂಬ್ ಸ್ಪೋಟಕ್ಕೆ ಕೆಲವೇ ಕ್ಷಣಗಳ ಮೊದಲು ಟೆರರ್ ವೈದ್ಯ ಗ್ಯಾಂಗ್ ನ್ನು ಪೊಲೀಸರು ಸೆರೆ ಹಿಡಿದಿದ್ದರು. ಆದರೆ ಈ ಗ್ಯಾಂಗ್ ನ್ನು ಅರೆಸ್ಟ್ ಮಾಡಿ ಭಾರತವನ್ನು ರಕ್ಷಿಸಲು ಮುಖ್ಯ ಕಾರಣವಾಗಿದ್ದು ಈ ಐಪಿಎಸ್ ಆಫೀಸರ್.
ಅವರೇ ಐಪಿಎಸ್ ಡಾ ಜಿ.ವಿ. ಸಂದೀಪ್ ಚಕ್ರವರ್ತಿ. 2014 ಐಪಿಎಸ್ ಬ್ಯಾಚ್ ಅಧಿಕಾರಿಯಾಗಿರುವ ಇವರು ಶ್ರೀನಗರದ ಎಸ್ಎಸ್ ಪಿ. ಅನಂತನಾಗ್ ಜಿಲ್ಲೆಯ ನೌಗಾಮ್ ನಲ್ಲಿ ಕೆಲವು ಕಡೆ ಜೈ ಶ್ ಇ ಮೊಹಮ್ಮದ್ ಸಂಘಟನೆ ಸೇರುವಂತೆ ಪ್ರಚೋದನಕಾರೀ ಪೋಸ್ಟರ್ ಗಳಿದ್ದವು. ಇದನ್ನು ಗಮನಿಸಿದ ಆಫೀಸರ್ ಸಂದೀಪ್ ಚಕ್ರವರ್ತಿ ಸುಮ್ಮನೇ ಕಡೆಗಣಿಸಲಿಲ್ಲ.
ಬದಲಾಗಿ ಈ ಪೋಸ್ಟರ್ ಹಿಂದೆ ಯಾರಿದ್ದಾರೆ ಎಂದು ಬೆನ್ನು ಬಿದ್ದರು. ಪರಿಣಾಮವೇ ವೈದ್ಯರಾಗಿದ್ದುಕೊಂಡು ದೇಶದೊಳಗೇ ವಿಧ್ವಂಸಕ ಕೃತ್ಯ ನಡೆಸಲು ತಯಾರಾಗಿದ್ದ ಉಗ್ರರ ಜಾಲ ಸಿಕ್ಕಿಬಿತ್ತು. ಈ ಉಗ್ರರಿಂದ 2,900 ಕೆ.ಜಿಯಷ್ಟು ಸ್ಪೋಟಕ ವಶಪಡಿಸಿಕೊಳ್ಳಲಾಯಿತು.
ಒಂದು ವೇಳೆ ಅವರು ಆ ಕರಪತ್ರಗಳನ್ನು ಕಡೆಗಣಿಸಿದ್ದರೆ ಇಷ್ಟು ಪ್ರಮಾಣದ ಸ್ಪೋಟಕಗಳನ್ನು ಬಳಸಿ ವೈದ್ಯರ ವೇಷ ಹಾಕಿಕೊಂಡಿದ್ದ ಉಗ್ರರು ದೇಶದ ಪ್ರಮುಖ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸುತ್ತಿತ್ತು. ಈ ಐಪಿಎಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ ಎನ್ನಬಹುದು.