Publish Date: Fri, 14 Nov 2025 (11:56 IST)
Updated Date: Fri, 14 Nov 2025 (12:00 IST)
ಪಾಟ್ನಾ: ಜನ ಕೊಟ್ಟ ತೀರ್ಪು ಒಪ್ಕೋಬೇಕಲ್ಲಾ? ಎನ್ ಡಿಎ ಯಾಕೆ ಇಷ್ಟು ದೊಡ್ಡ ಬಹುಮತದಲ್ಲಿ ಗೆಲ್ತಿದೆ ಗೊತ್ತಿಲ್ಲ. ನಾನು ಇನ್ನೂ ಸರಿಯಾಗಿ ನೋಡಿಲ್ಲ ಎಂದಿದ್ದಾರೆ.
ಬಿಹಾರ ವಿಧಾನಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಕೂಟ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಇತ್ತ ಆರ್ ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನ ಹೀನಾಯ ಸೋಲಿನತ್ತ ಸಾಗುತ್ತಿದೆ. ಇದರ ಬಗ್ಗೆ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೇಳಿವೆ.
ಬಿಹಾರದಲ್ಲಿ ಸಾಕಷ್ಟು ನಿರೀಕ್ಷೆಯಿತ್ತಲ್ವಾ? ಆದರೂ ಯಾಕೆ ಗೆದ್ದಿಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಯಾಕೆ, ಏನು ಗೊತ್ತಿಲ್ಲ. ನಾನು ಇನ್ನೂ ಸರಿಯಾಗಿ ನೋಡಿಲ್ಲ. ಯಾಕೆ ಹೀಗಾಯ್ತು, ಜನ ಯಾಕೆ ವೋಟ್ ಹಾಕಿಲ್ಲ ಎಂದು ತಿಳುದಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಇತ್ತಿಚೆಗಿನ ವರದಿ ಬಂದಾಗ ಎನ್ ಡಿಎ ಮೈತ್ರಿ ಕೂಟ 190 ಸ್ಥಾನಗಳಲ್ಲಿ ಮತ್ತು ಮಹಾಘಟಬಂಧನ 49 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.