Select Your Language

Notifications

webdunia
webdunia
webdunia
webdunia

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Gold
ಬೆಂಗಳೂರು: ಈ ವಾರ ಆರಂಭದಲ್ಲೇ ಚಿನ್ನದ ದರ ಏರಿಕೆಯತ್ತ ಸಾಗಿದೆ. ಇಂದಂತೂ ಪರಿಶುದ್ಧ ಚಿನ್ನದ ದರ ಭಾರೀ ಏರಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಇಳಿಕೆ ಕಂಡಿತ್ತು. ಆದೆರ ಈಗ ಚಿನ್ನದ ದರ ಮತ್ತೆ ದಾಖಲೆಯತ್ತ ದಾಪುಗಾಲಿಡುತ್ತಿದೆ. ಇದರ ನಡುವೆ ಪರಿಶುದ್ಧ ಚಿನ್ನದ ದರ ಏರಿಕೆ ಮತ್ತು ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಭಾರೀ ಏರಿಕೆ ಕಂಡಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,27,980.00 ರೂ.ಗಳಿತ್ತು. ಇಂದು ಭಾರೀ ಏರಿಕೆಯಾಗಿದ್ದು 1,30,905.00 ರೂ.ಗಳಷ್ಟಾಗಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ ದರ ಪ್ರತೀ ಗ್ರಾಂಗೆ 77 ರೂ. ಇಳಿಕೆಯಾಗಿದ್ದು 12,785 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ ದರ 70 ರೂ. ಇಳಿಕೆಯಾಗಿದ್ದು 11,720 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 58 ರೂ. ಇಳಿಕೆಯಾಗಿದ್ದು 9,589 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಈ ವಾರವೂ ಏರುಗತಿಯಲ್ಲೇ ಇದೆ. ಇಂದು ಬೆಳ್ಳಿ ದರ ಪ್ರತೀ ಕೆ.ಜಿ.ಗೆ 1000 ರೂ.ಗಳಷ್ಟು ಏರಿಕೆಯಾಗಿದೆ. ಇಂದು ಪ್ರತೀ ಕೆ.ಜಿಗೆ ಬೆಳ್ಳಿ ದರ 1,73,000 ರೂ. ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ