ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಇಬ್ಬರೂ ಚುನಾವಣೆ ಕಣದಲ್ಲಿದ್ದಾರೆ. ಇಬ್ಬರ ಕತೆ ಏನಾಗಿದೆ ನೋಡಿ.
ಮಹಾಘಟಬಂಧನ್ ನ ಸಿಎಂ ಅಭ್ಯರ್ಥಿಯಾಗಿರುವ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ರಘೋಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇದೀಗ ಆರಂಭಿಕ ಹಂತದಲ್ಲಿ ಅವರು ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಸತೀಶ್ ಕುಮಾರ್ ಅವರಿಗೆ ಎದುರಾಳಿಯಾಗಿದ್ದಾರೆ.
ಇನ್ನು ಮಹುವಾ ಕ್ಷೇತ್ರದಿಂದ ಲಾಲೂ ಇನ್ನೊಬ್ಬ ಪುತ್ರ ತೇಜ್ ಪ್ರತಾಪ್ ಯಾದವ್ ಜೆಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ತಂದೆ ಹಾಗೂ ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳಾದ ಬಳಿಕ ತೇಜ್ ಪ್ರತಾಪ್ ಯಾದವ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು. ಆದರೆ ಅವರೀಗ ಹಿನ್ನಡೆಯಲ್ಲಿದ್ದಾರೆ. ಆದರೆ ಹೆಚ್ಚು ಅಂತರವಿಲ್ಲ. ಇದೇ ಕ್ಷೇತ್ರದಿಂದ ಅವರು 2015 ರಲ್ಲಿ ಗೆಲುವು ಕಂಡಿದ್ದರು. ಇಲ್ಲಿ 2020 ರಲ್ಲಿ ಇದೇ ಕ್ಷೇತ್ರದಲ್ಲಿದ್ದ ಗೆದ್ದಿದ್ದ ಆರ್ ಜೆಡಿ ಪಕ್ಷದ ಎಂಎಲ್ ಎ ಮುಕೇಶ್ ಕುಮಾರ್ ಅವರಿಗೆ ಎದುರಾಳಿಯಾಗಿದ್ದಾರೆ.