ಪಾಟ್ನಾ: ಬಿಹಾರದಲ್ಲಿ ಎನ್ ಡಿಎ ಮೈತ್ರಿ ಕೂಟ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಮಹಾಘಟಬಂಧನ್ ಗೆ ಸೋಲಿನ ಸುಳಿವು ಸಿಗುತ್ತಿದ್ದಂತೇ ಇದೀಗ ಕಾಂಗ್ರೆಸ್ ನಾಯಕ ಪವನ್ ಖೇರಾ ಚುನಾವಣಾ ಆಯೋಗವೇ ಎನ್ ಡಿಎಯನ್ನು ಗೆಲ್ಲಿಸುತ್ತಿದೆ ಎಂದಿದ್ದಾರೆ.
ಬಿಹಾರ ವಿಧಾನಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಈಗಿನ ಟ್ರೆಂಡ್ ಪ್ರಕಾರ ಎನ್ ಡಿಎ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಎನ್ ಡಿಎ 193 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್-ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ 47 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಅಧಿಕಾರಕ್ಕೇರುವ ವಿಶ್ವಾದಲ್ಲಿದ್ದ ಕಾಂಗ್ರೆಸ್ ಗೆ ಈ ಮುನ್ನಡೆ ನುಂಗಲಾರದ ತುತ್ತಾಗಿದೆ. ಇದರ ಬಗ್ಗೆ ಇದೀಗ ಪವನ್ ಖೇರಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲಾ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವರ್ಸಸ್ ಬಿಹಾರ ಜನತೆ ನಡುವಿನ ಚುನಾವಣೆ ಎಂದಿದ್ದಾರೆ.
ಜ್ಞಾನೇಶ್ ಕುಮಾರ್ ಬಿಹಾರ ಜನತೆಯ ಪಾಲಿಗೆ ಅಪಾಯಕಾರಿಯಾಗಿದ್ದಾರೆ. ಇದು ಬಿಹಾರ ಚುನಾವಣೆಯಲ್ಲ. ಬಿಹಾರ ಜನತೆ ಮತ್ತು ಜ್ಞಾನೇಶ್ ಕುಮಾರ್ ನಡುವಿನ ಚುನಾವಣೆ ಎಂದಿದ್ದಾರೆ. ಈ ಮೂಲಕ ಎನ್ ಡಿಎ ಗೆದ್ದರೂ ಅದು ನ್ಯಾಯಯುತವಾದ ಗೆಲುವಲ್ಲ ಎಂದಿದ್ದಾರೆ.