ನವದೆಹಲಿ: ದೆಹಲಿಯಲ್ಲಿ ಕಾರು ಬಾಂಬ್ ಸ್ಪೋಟ ಮಾಡಿಕೊಂಡು ಆತ್ಮಾಹುತಿ ದಾಳಿ ನಡೆಸಿದ ಉಗ್ರ ಡಾ ಉಮರ್ ನಬಿಗೆ ಸೇರಿದ ಪುಲ್ವಾಮದಲ್ಲಿರುವ ಮನೆಯನ್ನು ಧ್ವಂಸಗೊಳಿಸಲಾಗಿದೆ.
ನವಂಬರ್ 10 ರಂದು ದೆಹಲಿಯಲ್ಲಿ ಕಾರು ಬಾಂಬ್ ಸ್ಪೋಟವಾಗಿತ್ತು. ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದರು. ಇನ್ನು ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಘಟನೆಗೆ ಮೊದಲು ವೈದ್ಯ ಉಗ್ರರ ಜಾಲವನ್ನೇ ಪೊಲೀಸರು ಬಯಲು ಮಾಡಿತ್ತು.
ಇದೀಗ ದೆಹಲಿಯಲ್ಲಿ ಐ20 ಕಾರು ಬಳಸಿ ಸ್ಪೋಟ ನಡೆಸಿದ್ದ ವೈದ್ಯ ಡಾ ಉಮರ್ ನಬಿಗೆ ಸೇರಿದ್ದ ಪುಲ್ವಾಮಾದಲ್ಲಿರುವ ಮನೆಯನ್ನು ರಾತ್ರೋ ರಾತ್ರಿ ನೆಲಸಮ ಮಾಡಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಆತನಿಗೆ ಸೇರಿದ ಮನೆಯಿತ್ತು.
ಮನೆಯ ವಸ್ತುಗಳೆಲ್ಲವೂ ಛಿದ್ರ ಛಿದ್ರಗೊಳಿಸಲಾಗಿದೆ. ದೆಹಲಿ ಸ್ಪೋಟದ ಬಳಿಕ ಆತನ ಮೃತದೇಹದ ಅವಶೇಷಗಳು ಸಿಕ್ಕಿದ್ದವು. ಇದನ್ನು ಡಿಎನ್ ಎ ಪರೀಕ್ಷೆಗೊಳಪಡಿಸಿದಾಗ ಆತನದ್ದೇ ದೇಹವೆಂದು ಖಚಿತವಾಗಿತ್ತು.