ಇಂಧೋರ್: ಬಿಹಾರ ಚುನಾವಣೆಯಲ್ಲಿ ಎನ್ ಡಿಎ ಗೆಲುವಿನಿಂದ ಜನರು ಖುಷಿಯಾಗಿಲ್ಲ. ಹೀಗಾಗಿ ಇಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶಕ್ಕೆ ಭೇಟಿ ನೀಡಿರುವ ರಾಬರ್ಟ್ ವಾದ್ರಾ ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಹಾರದ ಚುನಾವಣೆಯಲ್ಲಿ ಬಂದಿರುವ ಫಲಿತಾಂಶ ಚುನಾವಣಾ ಆಯೋಗವೇ ನೀಡಿರುವುದು. ಇದು ಜನರು ನೀಡಿದ ಫಲಿತಾಂಶವಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ಶೀಘ್ರದಲ್ಲೇ ಜನರನ್ನು ಭೇಟಿಯಾಗಲಿದ್ದಾರೆ. ಅವರ ಅಭಿಪ್ರಾಯ ಕೇಳಲಿದ್ದಾರೆ. ಸಂವಿಧಾನದ ರಕ್ಷಣೆಗಾಗಿ ಅವರು ಹೋರಾಡಲಿದ್ದಾರೆ. ದೇಶಕ್ಕೆ ಬದಲಾವಣೆ ಬೇಕಾಗಿದೆ. ಸರ್ಕಾರ ಏನೇ ತಪ್ಪು ಮಾಡಿದರೂ ಯುವಕರು ಅದನ್ನು ಇಷ್ಟಪಡುವುದಿಲ್ಲ. ನಾವು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಲಿದ್ದೇವೆ ಎಂದಿದ್ದಾರೆ.
ಇನ್ನು, ಬಿಹಾರದಲ್ಲಿ ಎನ್ ಡಿಎ ಗೆಲುವಿನಿಂದ ಜನರು ಖುಷಿಯಾಗಿಲ್ಲ. ಇದು ಜನತೆ ನೀಡಿರುವ ಗೆಲುವಲ್ಲ. ಚುನಾವಣಾ ಆಯೋಗವೇ ಅವರಿಗೆ ಸಹಾಯ ಮಾಡಿದೆ ಎಂದಿದ್ದಾರೆ.