ಬೆಂಗಳೂರು: ಮತಗಳ್ಳತನ ಎನ್ನುವುದು ಕಾಂಗ್ರೆಸ್ ನ ಚುನಾವಣೆ ತಂತ್ರ. ಆಗ ರಾಹುಲ್ ಗಾಂಧಿ ವಿದೇಶದಲ್ಲಿ ಕಾಫಿ ಕುಡಿಯುತ್ತಿದ್ದರು ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ತಿರುಗೇಟು ಕೊಟ್ಟಿದ್ದಾರೆ.
ಬಿಹಾರದಲ್ಲಿ ಎನ್ ಡಿಎ ಪ್ರಚಂಡ ಬಹುಮತದೊಂದಿಗೆ ಗೆಲ್ಲುತ್ತಿದ್ದಂತೇ ಕಾಂಗ್ರೆಸ್ ನಾಯಕರು ಇದು ನ್ಯಾಯ ಸಮ್ಮತ ಚುನಾವಣೆ ಅಲ್ಲ. ವೋಟ್ ಚೋರಿಯಿಂದ ಬಿಜೆಪಿ ಗೆದ್ದಿದೆ ಎಂದು ಹುಯ್ಯಿಲೆಬ್ಬಿಸಿದೆ. ಈ ವಿಚಾರವಾಗಿ ಸಂಸದ ಯದುವೀರ್ ಒಡೆಯರ್ ಇಂದು ತಿರುಗೇಟು ಕೊಟ್ಟಿದ್ದಾರೆ.
ಬಿಹಾರದಲ್ಲಿ ಸೋತ ಬಳಿಕ ಕಾಂಗ್ರೆಸ್ ಈ ತಂತ್ರ ಮಾಡುತ್ತಿದೆ. ಅವರ ನಿರೂಪಣೆಗೆ ಬೆಲೆ ಇಲ್ಲ. ಸಾಕ್ಷಿ ಇದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಿ ಎಂದಿದ್ದೆವು. ಅದನ್ನು ಯಾವುದೂ ಮಾಡಿಲ್ಲ. ಜನರ ದಿಕ್ಕ ತಪ್ಪಿಸಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ.
ಆತ್ಮಾವಲೋಕನ ಮಾಡಬೇಕಾಗಿರುವುದು ಕಾಂಗ್ರೆಸ್ ಪಕ್ಷ. ಬಿಹಾರ ಚುನಾವಣೆ ನಡೆಯುತ್ತಿದ್ದಾಗ ಅವರ ನಾಯಕರು ವಿದೇಶದಲ್ಲಿ ಕೂತು ಕಾಫಿ ಕುಡಿಯುತ್ತಿದ್ದುದನ್ನು ನಾವು ನೋಡಿದ್ದೇವೆ. ನಮ್ಮ ಎನ್ ಡಿಎ ನಾಯಕರು ಎಲ್ಲರೂ ಒಟ್ಟಾಗಿ ಬಿಹಾರಕ್ಕೆ ಹೋಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ತಮ್ಮ ನಾಯಕರು ಹೇಳಿದ್ದನ್ನು ಪುನರುಚ್ಚರಿಸುವ ಅನಿವಾರ್ಯತೆ ಇದೆ. ಅದಕ್ಕೇ ಹೇಳ್ತಿದ್ದಾರೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.