ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 21 ನೇ ಕಂತಿನ ಹಣ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಹೀಗಾಗಿ ಇಂದೇ ನಿಮ್ಮ ಬ್ಯಾಂಕ್ ಖಾತೆ ಎಲ್ಲವೂ ಸರಿಯಾಗಿದೆಯಾ ಎಂದು ಚೆಕ್ ಮಾಡಿಕೊಳ್ಳಿ.
ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ವರ್ಷಕ್ಕೆ ಮೂರು ಕಂತುಗಳಂತೆ ರೈತರ ಖಾತೆಗೆ ತಲಾ 2,000 ರೂ.ಗಳಂತೆ 6,000 ರೂ. ಜಮೆ ಆಗುತ್ತದೆ. ಈಗಾಗಲೇ 20 ಕಂತಿನ ಹಣ ರೈತರ ಖಾತೆಗೆ ಬಂದು ಸೇರಿದೆ. ಇದೀಗ 21 ನೇ ಕಂತಿನ ಹಣ ಬಿಡುಗಡೆಗೆ ಸಮಯ ನಿಗದಿಯಾಗಿದೆ.
ನವಂಬರ್ 19 ಬುಧವಾರದಂದು 21 ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. 10 ಕೋಟಿ ರೈತರ ಖಾತೆಗೆ ನೇರವಾಗಿ 2,000 ರೂ. ಹಣ ಸಂದಾಯವಾಗಲಿದೆ. ಕಳೆದ ಕಂತಿನ ಹಣ ಆಗಸ್ಟ್ ನಲ್ಲಿ ಬಿಡುಗಡೆಯಾಗಿತ್ತು.
ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಈ ಬಗ್ಗೆ ನಿಖರ ಮಾಹಿತಿ ನೀಡಲಾಗುತ್ತದೆ. ಫಲಾನುಭವಿಗಳ ಪಟ್ಟಿ ಇದರಲ್ಲಿ ನೀಡಲಾಗುವುದು. ನಿಮ್ಮ ಹೆಸರು ಇದರಲ್ಲಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು. ಜೊತೆಗೆ ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದೆಯಾ ಎಂದೂ ಚೆಕ್ ಮಾಡಿಕೊಳ್ಳಿ.