ಬಾಲಿವುಡ್ ಅಂಗಳದಲ್ಲಿ ಈಚೆಗೆ ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಆದರೆ ನಟಿ ಈ ಬಗ್ಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ. ಇದೀಗ ನಟಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎರಡನೇ ಮಗುವಿನ ಆಗಮನದ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
Instagram ನಲ್ಲಿ ಸೊಗಸಾದ ಫೋಟೋಗಳ ಸರಣಿಯೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ತಾರೆ ಮತ್ತು ಜಾಗತಿಕ ಫ್ಯಾಷನ್ ಐಕಾನ್, "ತಾಯಿ ????" ಎಂಬ ಶೀರ್ಷಿಕೆಯ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.
2018ರಲ್ಲಿ ಆನಂದ್ ಅಹುಜಾರನ್ನು ಮದುವೆಯಾಗಿರುವ ಸೋನಂ ಅವರಿಗೆ ಈಗಾಗಲೇ ವಾಯು ಎಂಬ ಮಗನಿದ್ದಾನೆ. ತಮ್ಮ 40ನೇ ವಯಸ್ಸಿನಲ್ಲಿ ಸೋನಂ ಕಪೂರ್ 2ನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇನ್‌ಸ್ಟಾದಲ್ಲಿ ಬೇಬಿ ಬಂಪ್ ಫೋಟೋಗಳನ್ನ ಹಂಚಿಕೊಂಡಿರುವ ಸೋನಂ ಕಡು ಗುಲಾಬಿ ಬಣ್ಣದ ಸೂಟ್ ಧರಿಸಿ ಮಿಂಚಿದ್ದಾರೆ.