ರಾಮನಗರ: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್‌ನ 12ನೇ ಆವೃತ್ತಿ ಈಗಾಗಲೇ 50 ದಿನ ಪೂರೈಸಿದ್ದು, ನೂರನೇ ದಿನದತ್ತ ಸಾಗುತ್ತಿದೆ. ಈ ಮಧ್ಯೆ ಬಿಗ್‌ಬಾಸ್ ಮನೆಯಲ್ಲಿ ನಡೆದ ಘಟನೆಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿನಟನ ಮೇಲೆ ಸಹ ಸ್ಪರ್ಧಿ ರಿಷಾ ಗೌಡ ಹಲ್ಲೆ ಮಾಡಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗಿಲ್ಲಿ ನಟನ ಅಭಿಮಾನಿಗಳು ರಾಮನಗರ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಿಲ್ಲಿ ನಟನ ಅಭಿಮಾನಿಗಳ ಪರವಾಗಿ ಮಧು ಎಂಬವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಿಷಾ ಗೌಡ, ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಬಿಗ್‌ಬಾಸ್ ಆಯೋಜಕರು ಸುಮ್ಮನಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ವಾರದ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ನಡೆದು, ರಿಷಾಗೆ ಎಚ್ಚರಿಕೆ ನೀಡಲಾಗಿತ್ತು.
ಗಿಲ್ಲಿ ನಟನ ಮೇಲೆ ನಡೆದ ಹಲ್ಲೆಯನ್ನು ಅಭಿಮಾನಿಗಳಾದ ನಾವು ಸುಮ್ಮನಿರುವುದಿಲ್ಲ. ರಿಷಾ ಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.