Select Your Language

Notifications

webdunia
webdunia
webdunia
webdunia

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

Rashmi prabhakar

Sampriya

ಬೆಂಗಳೂರು , ಸೋಮವಾರ, 20 ಅಕ್ಟೋಬರ್ 2025 (16:25 IST)
Photo Credit X
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್ ಖಾತಿಯ ನಟಿ ರಶ್ಮಿ ಪ್ರಭಾಕರ್ ಅವರು ಇದೇ 3ರಂದು ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಈ ಸಿಹಿ ಸುದ್ದಿಯನ್ನು ನಟಿ ರಶ್ಮಿ ಪ್ರಭಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡು, ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ‘ನಮ್ಮ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. 3/10/2025ರಂದು ನಮಗೆ ಪುಟ್ಟ ರಾಜಕುಮಾರ ಸಿಕ್ಕಿದ್ದಾನೆ. ಇಡೀ ವಿಶ್ವಕ್ಕೆ ಧನ್ಯವಾದಗಳು’ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

2022ರ ಏಪ್ರಿಲ್ 25ರಂದು ನಿಖಿಲ್‌ ಎಂಬುವವರನ್ನು ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಇದೀಗ ದಂಪತಿ ಅಕ್ಟೋಬರ್ 3ರಂದು ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ.

ನಟಿ ರಶ್ಮಿ ಅವರು, ‘ಲಕ್ಷ್ಮೀ ಬಾರಮ್ಮ’, ‘ಜೀವನಚೈತ್ರ’, ‘ಶುಭವಿವಾಹ’, ‘ಮನಸೆಲ್ಲಾ ನೀನೇ’ ಸೇರಿದಂತೆ ಕನ್ನಡ ಹಾಗೂ ಪರಭಾಷೆಯ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು, ನಟಿ ಹಂಚಿಕೊಂಡ ಪೋಸ್ಟ್‌ ನೋಡಿ, ಸ್ನೇಹಿತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ