Select Your Language

Notifications

webdunia
webdunia
webdunia
webdunia

BigBoss Season 12: ಎರಡನೇ ದಿನವೇ ಗಿಲ್ಲಿ ವಿರುದ್ಧ ಗರಂ ಆದ ಅಶ್ವಿನಿ

ಬಿಗ್‌ಬಾಸ್ ಸೀಸನ್ 11

Sampriya

ಬೆಂಗಳೂರು , ಮಂಗಳವಾರ, 30 ಸೆಪ್ಟಂಬರ್ 2025 (17:04 IST)
Photo Credit X
ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಶುರುವಾದ ಎರಡನೇ ದಿನಕ್ಕೆ ದೊಡ್ಮನೆಯಲ್ಲಿ ಬಿಸಿಯೇರಿದೆ. ಹೌದು ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಕಾವ್ಯ ಹಾಗೂ ಗಿಲ್ಲಿ ವಿರುದ್ಧ ಅಶ್ವಿನಿ ಗೌಡ ಗರಂ ಆಗಿದ್ದಾರೆ. 

ಪ್ರೊಮೋದಲ್ಲಿ ನಟಿ, ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಕಾವ್ಯ ಹಾಗೂ ಗಿಲ್ಲಿ ನಟನಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರೋಮೋದಲ್ಲಿ ಹೀಗಿದೆ: 

‘ಕಾವ್ಯ ಮತ್ತು ಗಿಲ್ಲಿ ನಾವು ಏನಾದರೂ ಹೇಳಿದಾಗ ನೀವು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೀರಿ. ನೀವು ಗೌರವಯುತವಾಗಿ ನಡೆದುಕೊಂಡಾಗ ಮಾತ್ರ ನಮಗೂ ಒಂದು ಗೌರವ. ಮರ್ಯಾದೆ ಕೊಟ್ಟು ಮರ್ಯಾದೆ ತಗೋಬೇಕು ಎಂದು
ಅಶ್ವಿನಿ ಗೌಡ ಎಚ್ಚರಿಕೆ ಕೊಟ್ಟಿದ್ದಾರೆ. ಆಗ ಗಿಲ್ಲಿ ನಟ, ಬೆಲೆ ಇರೋದಕ್ಕೆ ಹೀಗೆ ಮಾತಾಡುತ್ತಿದ್ದೇನೆ. ಇಲ್ಲವಾದರೆ, ನಾನು ಹೋಗೇ ಬಾರೇ ಎಂದು ಮಾತಾಡುತ್ತೇನೆ ಎಂದು ಅಶ್ವಿನಿ ಅವರಿಗೆ ಹೇಳಿದ್ದಾರೆ. ಇದೇ ವಿಚಾರಕ್ಕೆ ಗಿಲ್ಲಿ ನಟ, ಅಶ್ವಿನಿ ಹಾಗೂ ಕಾವ್ಯ ಮಧ್ಯೆ ಗಲಾಟೆ ನಡೆದಿದೆ.

ಇನ್ನು, ಈ ಮೂವರು ಗಲಾಟೆ ಮಾಡುತ್ತಿದ್ದಂತೆ ಮನೆಮಂದಿ ಶಾಕ್‌ ಆಗಿದ್ದಾರೆ. ಆದರೆ ಯಾರೊಬ್ಬರು ಅವರ ಗಲಾಟೆಯನ್ನು ಬಿಡಿಸುವುದಕ್ಕೆ ಬರಲಿಲ್ಲ. ಗಲಾಟೆ ವೇಳೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದರು.

ಬಿಗ್‌ಬಾಸ್‌ ಆರಂಭದ ಎರಡನೇ ದಿನವೇ ಸ್ಪರ್ಧಿಗಳ ಮಧ್ಯೆ ಶುರುವಾಗಿದ್ದು, ಈ ಭಾರೀ ನಿರೀಕ್ಷೆಗೂ ಮೀರಿ ಟ್ವಿಸ್ಟ್‌ಗಳು ಇರಬಹುದು ಎಂದು ಲೆ‌ಕ್ಕಚಾರ ಶುರುವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಮ್ಮ ಅಭಿಮಾನಿಗಳಿಂದ ಬಿಗ್‌ಬಾಸ್ ಆಯೋಜಕರಿಗೆ ವಿಶೇಷ ಮನವಿ