ಮ್ಯಾಕ್ಸ್‌ನಂತಹ ಸೂಪರ್ ಹಿಟ್ ಸಿನಿಮಾವನ್ನು ನೀಡಿದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ನಟ ಕಿಚ್ಚ ಸುದೀಪ್ ಅವರು ಭರ್ಜರಿ ಗಿಫ್ಟ್ ನೀಡಿದ್ದಾರೆ.
ನಟ ಸುದೀಪ್ ಅವರು ತಮ್ಮ ಪ್ರೀತಿ ಪಾತ್ರರಾಗಿ ಗಿಫ್ಟ್ ನೀಡುವ ಮೂಲಕ ಸರ್ಪೈಸ್ ಅನ್ನು ನೀಡುತ್ತಲೇ ಇರುತ್ತಾರೆ. ಇದೀಗ ಅವರಿಗೆ ಹಿಟ್ ಸಿನಿಮಾದ ಮಾಕ್ಸ್ ಅನ್ನು ನೀಡಿದ ನಿರ್ದೇಶಕರಿಗೆ ಕಾರನ್ನು ಗಿಫ್ಟ್ ನೀಡಿದ್ದಾರೆ.
ವಿಜಯ್ ಕಾರ್ತಿಕೇಯ ಅವರು ಇದೀಗ ಸುದೀಪ್ ಅವರಿಗೆ ಮಾರ್ಕ್ ಸಿನಿಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರ ಕೆಲಸವನ್ನ ಮೆಚ್ಚಿಕೊಂಡಿರುವ ನಟ ಕಿಚ್ಚ ಸುದೀಪ್ ಕಾರ್ ಗಿಫ್ಟ್ ಕೊಟ್ಟಿದ್ದಾರೆ.
ಈ ಫೋಟೋಗಳನ್ನ ತಮ್ಮ ಜಾಲತಾಣದಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯ ಹಂಚಿಕೊಂದ್ದಾರೆ. ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ.
ವಿಜಯ್ ಕಾರ್ತಿಕೇಯ ಅವರಿಗೆ ಸ್ಕೋಡಾ ಕಂಪನಿಯ ಕಾರ್‌ನ್ನ ಸುದೀಪ್ ತಮ್ಮ ಜೆಪಿ ನಗರದ ನಿವಾಸದಲ್ಲಿ ಉಡುಗೊರೆ ನೀಡಿದ್ದು, ಗಿಫ್ಟ್ ಪಡೆದ ನಿರ್ದೇಶಕ ಖುಷಿಯಾಗಿದ್ದಾರೆ.