ಬೆಂಗಳೂರು: ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಅನ್ನು ಹ್ಯಾಕ್ ಮಾಡಿದ ಸಂಬಂಧ ದೂರು ದಾಖಲಾಗಿತ್ತು. ಪ್ರಕರಣ ದಾಖಲಸಿಕೊಂಡ ಸದಾಶಿವನಗರ ಪೊಲೀಸರು ಇದೀಗ ಹ್ಯಾಕರ್ಗಳ ಮೂಲ ಪತ್ತೆ ಮಾಡಿದ್ದಾರೆ.
ಪ್ರಿಯಾಂಕಾ ಅವರಿಗೆ ಕರೆ ಮಾಡುವ ಮೂಲಕ ಅವರನ್ನು ಮೊಬೈಲ್ ಅನ್ನು ಹ್ಯಾಕ್ ಮಾಡಿದ್ದಾರೆ.
ಸುಮಾರು 1.65 ಲಕ್ಷ ರೂ. ಹಣ ಪಡೆದುಕೊಂಡು, ನಾಲ್ಕು ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ನಾಲ್ಕು ಅಕೌಂಟ್ ಗಳು ಕೂಡ ನಕಲಿ ಆಗಿರುವುದು ಗೊತ್ತಾಗಿದೆ.
ಅದೇ ನಂಬರ್ ಬಳಸಿ, ಅದೇ ದಿನ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಕೆಲವರ ಮೊಬೈಲ್ ಗಳನ್ನು ಹ್ಯಾಕ್ ಮಾಡಲಾಗಿದೆ.
ಸದ್ಯ ಸದಾಶಿವನಗರ ಪೊಲೀಸರು, ಹ್ಯಾಕರ್ಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಬಿಹಾರಕ್ಕೆ ವಿಶೇಷ ತಂಡ ಕಳುಹಿಸಲು ಸಿದ್ದತೆ ನಡೆದಿದೆ.