Select Your Language

Notifications

webdunia
webdunia
webdunia
webdunia

ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದ ಅಧಿಕಾರಿ ಮನೆ ದಾಳಿ ವೇಳೆ ಸಿಕ್ತು ಕಂತೆ ಕಂತೆ ಹಣ, ಚಿನ್ನ

ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ನೂಪುರ್ ಬೋರಾ

Sampriya

ಗುವಾಹಟಿ , ಮಂಗಳವಾರ, 16 ಸೆಪ್ಟಂಬರ್ 2025 (14:45 IST)
Photo Credit X
ಗುವಾಹಟಿ: ಅಸ್ಸಾಂ ಸಿವಿಲ್ ಸರ್ವಿಸ್ (ಎಸಿಎಸ್) ಅಧಿಕಾರಿಯೊಬ್ಬರು ತಮ್ಮ ಆದಾಯಕ್ಕೆ ಮೀರಿದ ಆಸ್ತಿಯನ್ನು ಹೊಂದಿದ್ದ ಆರೋಪದ ಮೇಲೆ ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಮುಖ್ಯಮಂತ್ರಿಗಳ ವಿಶೇಷ ವಿಜಿಲೆನ್ಸ್ ಸೆಲ್‌ನ ಅಧಿಕಾರಿಗಳ ತಂಡವು ಅಧಿಕಾರಿ ನೂಪುರ್ ಬೋರಾ ಅವರ ಗುವಾಹಟಿ ನಿವಾಸದ ಮೇಲೂ ದಾಳಿ ನಡೆಸಿ 92 ಲಕ್ಷ ರೂಪಾಯಿ ನಗದು ಮತ್ತು ಸುಮಾರು 1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಾರ್ಪೇಟಾದಲ್ಲಿರುವ ಆಕೆಯ ಬಾಡಿಗೆ ಮನೆಯಲ್ಲಿ ದಾಳಿ ನಡೆಸಿದಾಗ 10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

2019 ರಲ್ಲಿ ಅಸ್ಸಾಂ ಸಿವಿಲ್ ಸೇವೆಗೆ ಸೇರಿದ ಗೋಲಾಘಾಟ್ ನಿವಾಸಿ ನೂಪುರ್ ಬೋರಾ ಪ್ರಸ್ತುತ ಕಮ್ರೂಪ್ ಜಿಲ್ಲೆಯ ಗೊರೊಮರಿಯಲ್ಲಿ ವೃತ್ತ ಅಧಿಕಾರಿಯಾಗಿ ನೇಮಕಗೊಂಡಿದ್ದರು.

ವಿವಾದಾತ್ಮಕ ಭೂಮಿ ಸಂಬಂಧಿತ ಸಮಸ್ಯೆಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಆಕೆ ಮೇಲೆ ನಿಗಾ ಇರಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

''ಬಾರ್ಪೇಟಾ ಕಂದಾಯ ವೃತ್ತದಲ್ಲಿ ನಿಯೋಜನೆಗೊಂಡಾಗ ಈ ಅಧಿಕಾರಿ ಹಿಂದೂ ಭೂಮಿಯನ್ನು ಅನುಮಾನಾಸ್ಪದ ವ್ಯಕ್ತಿಗಳಿಗೆ ಹಣದ ವಿನಿಮಯಕ್ಕಾಗಿ ವರ್ಗಾಯಿಸಿದ್ದರು. ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ,'' ಎಂದರು.

ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕಂದಾಯ ವಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಶರ್ಮಾ ಹೇಳಿದರು.

ವಿಶೇಷ ವಿಜಿಲೆನ್ಸ್ ಸೆಲ್ ಬಾರ್ಪೇಟಾದ ಕಂದಾಯ ವೃತ್ತದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಕೆಯ ಸಹಾಯಕ ಆಪಾದಿತ ಲಾಟ್ ಮಂಡಲ್ ಸೂರಜಿತ್ ದೇಕಾ ಅವರ ನಿವಾಸದ ಮೇಲೂ ದಾಳಿ ನಡೆಸಿತು.

ನೂಪುರ್ ಬೋರಾ ಅವರನ್ನು ಸರ್ಕಲ್ ಆಫೀಸರ್ ಆಗಿ ನೇಮಿಸಿದ್ದಾಗ ಅವರೊಂದಿಗೆ ಶಾಮೀಲಾಗಿ ಬಾರ್ಪೇಟಾದಾದ್ಯಂತ ಅನೇಕ ಭೂ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡ ಆರೋಪವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಲ್ಲೇ 60 ಪರ್ಸೆಂಟ್ ಕಮಿಷನ್ ವಾಸನೆ ಹೊಡೀತಿದೆ: ಬಿಜೆಪಿ ಟೀಕೆ