ನವದೆಹಲಿ: ಬಿಎಂಡಬ್ಲ್ಯು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳಲ್ಲಿ ಅಧಿಕಾರಿ ನವಜೋತ್ ಸಿಂಗ್ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 
									
			
			 
 			
 
 			
					
			        							
								
																	ನಾರ್ತ್ ಬ್ಲಾಕ್‌ನಲ್ಲಿ ಹಣಕಾಸು ಸಚಿವಾಲಯದ ಅಡಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ 52 ವರ್ಷದ ನವಜೋತ್ ಅವರು ಸಾವನ್ನಪ್ಪಿದ್ದಾರೆ. 
									
										
								
																	ಶನಿವಾರ ಧೌಲಾ ಕುವಾನ್‌ನಲ್ಲಿ ಅವರ ಮೋಟಾರ್‌ಸೈಕಲ್‌ಗೆ ಬಿಎಂಡಬ್ಲ್ಯು ಡಿಕ್ಕಿ ಹೊಡೆದಿದ್ದರಿಂದ ಅಧಿಕಾರಿ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. 
									
											
							                     
							
							
			        							
								
																	ಡಿಸಿಪಿ (ನೈಋತ್ಯ) ಅಮಿತ್ ಗೋಯೆಲ್ ಮಾತನಾಡಿ, ಪ್ರತ್ಯಕ್ಷದರ್ಶಿಗಳು ಮಹಿಳೆಯೊಬ್ಬರು ಬಿಎಂಡಬ್ಲ್ಯು ಚಾಲನೆ ಮಾಡುತ್ತಿದ್ದಾಗ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. 
									
			                     
							
							
			        							
								
																	BMW ನಲ್ಲಿದ್ದವರಿಗೂ ಗಾಯಗಳಾಗಿವೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.