ಹಜಾರಿಬಾಗ್ (ಜಾರ್ಖಂಡ್): ಎಡಪಂಥೀಯ ಉಗ್ರವಾದಕ್ಕೆ ಮಹತ್ವದ ಹೊಡೆತವಾಗಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಾರ್ಖಂಡ್ ಪೊಲೀಸರು ಸೋಮವಾರ ಬೆಳಿಗ್ಗೆ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉನ್ನತ ನಕ್ಸಲ್ ನಾಯಕರನ್ನು ಹೊಡೆದುರುಳಿಸಿದ್ದಾರೆ.
ಸಿಆರ್‌ಪಿಎಫ್ ಅಧಿಕಾರಿಗಳ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಹಜಾರಿಬಾಗ್‌ನ ಗೋರ್ಹರ್ ಪ್ರದೇಶದ ಪಂತಿತ್ರಿ ಅರಣ್ಯದಲ್ಲಿ ಸಿಆರ್‌ಪಿಎಫ್ ಮತ್ತು ಜಾರ್ಖಂಡ್ ಪೊಲೀಸರ 209 ಕೋಬ್ರಾ ಬೆಟಾಲಿಯನ್ ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿತು. ಈ ವೇಳೆ ಉಗ್ರವಾದಕ್ಕೆ ಕಟ್ಟುನಿಟ್ಟಾದ ಸಂದೇಶವನ್ನು ನೀಡುವ ಹಾಗೇ ಮೂವರನ್ನು ಭದ್ರತಾ ಪಡೆ ಹೊಡೆದುರಿಳಿಸಿದೆ.
ಭದ್ರತಾ ಪಡೆಗಳು ಸ್ಥಳದಿಂದ ಮೂರು ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ಜಾರ್ಖಂಡ್‌ನಲ್ಲಿನ ಮಾವೋವಾದಿ ಜಾಲಕ್ಕೆ "ಮಹತ್ವದ ಹೊಡೆತ" ಎಂದು ಕರೆದರು.