Select Your Language

Notifications

webdunia
webdunia
webdunia
webdunia

ಲೈವ್ ಬಂದು ಎಚ್ಚರಿಕೆ ನೀಡಿದ ನಟ ಉಪೇಂದ್ರ: ಪತ್ನಿ ಪ್ರಿಯಾಂಕಗೆ ಮಹಾಮೋಸ Video

Upendra

Krishnaveni K

ಬೆಂಗಳೂರು , ಸೋಮವಾರ, 15 ಸೆಪ್ಟಂಬರ್ 2025 (12:13 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್ ವುಡ್ ನ ಬುದ್ಧಿವಂತ ನಟ. ಆದರೆ ಈಗ ಬುದ್ಧಿವಂತನಿಗೇ ಯಾರೋ ವಂಚನೆ ಮಾಡಿದ್ದಾರೆ. ಈ ಬಗ್ಗೆ ಅವರು ಲೈವ್ ಬಂದು ಎಚ್ಚರಿಕೆ ನೀಡಿದ್ದು ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ.

ಸೋಷಿಯಲ್ ಮೀಡಿಯಾ ಪುಟದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಉಪೇಂದ್ರ ಜನರಿಗೆ ಎಚ್ಚರವಾಗಿರುವಂತೆ ಹೇಳಿದ್ದಾರೆ. ‘ಇದೊಂದು ವಿಚಾರವನ್ನು ಎಲ್ಲರಿಗೂ ಹೇಳಬೇಕು ಎಂದು ನಾನು ವಿಡಿಯೋ ಮಾಡ್ತಿದ್ದೇನೆ. ಈವತ್ತು ಯಾವುದೋ ಒಂದು ನಂಬರ್ ಪ್ರಿಯಾಂಕಗೆ ಯಾವುದೋ ಒಂದು ನಂಬರ್ ಬಂದಿತ್ತು. ಅವಳು ಏನೋ ವಸ್ತು ಆರ್ಡರ್ ಮಾಡಿದ್ದಳು. ಅದರದ್ದು ಇರಬೇಕು ಎಂದುಕೊಂಡು ಅವಳು ಏನೋ ಹ್ಯಾಶ್ ಟ್ಯಾಗ್ ನಂಬರ್ ಎಲ್ಲಾ ಹಾಕಿದ್ದಾಳೆ. ನನ್ನ ಫೋನ್ ಕೂಡಾ ಬಳಸಲಾಗಿದೆ. ಯಾರೋ ಹ್ಯಾಕರ್ ಹೀಗೆಲ್ಲಾ ಮಾಡಿ ನಮ್ಮ ಫೋನ್ ಹ್ಯಾಕ್ ಮಾಡಿದ್ದಾರೆ. ಹೀಗಾಗಿ ದಯವಿಟ್ಟು ಹುಷಾರಾಗಿರಿ, ಯಾರಾದರೂ ನನ್ನ ನಂಬರ್ ನಿಂದ ಅಥವಾ ಪ್ರಿಯಾ ನಂಬರ್ ಇಟ್ಟುಕೊಂಡು ದುಡ್ಡು ಗಿಡ್ಡು ಕೇಳಿದ್ರೆ ದಯವಿಟ್ಟು ಯಾರೂ ಕೊಡಬೇಡಿ. ನಾವು ಈ ಬಗ್ಗೆ ಈಗಲೇ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದೇವೆ. ದಯವಿಟ್ಟು ಹುಷಾರಾಗಿರಿ. ಯಾವುದೇ ಮೆಸೇಜ್ ಬಂದರೂ ದುಡ್ಡು ಕಳುಹಿಸಲು ಹೋಗಬೇಡಿ’ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಚಾಪ್ಟರ್ 1 ಸಿನಿಮಾ ಕತೆಯೇನು ರಿವೀಲ್ ಆಯ್ತು ಆ ವಿಚಾರ