Select Your Language

Notifications

webdunia
webdunia
webdunia
webdunia

ತನ್ನ ಮ್ಯೂಸಿಕ್‌ನಿಂದ ವೈರಲ್‌ ಆದ ಹುಡುಗಿಗೆ ಅರ್ಜುನ್‌ ಜನ್ಯಾರಿಂದ ಸಿಕ್ತು ಶಾಕಿಂಗ್ ರಿಯ್ಯಾಕ್ಷನ್

Music Director Arjun Janya

Sampriya

ಬೆಂಗಳೂರು , ಭಾನುವಾರ, 14 ಸೆಪ್ಟಂಬರ್ 2025 (13:55 IST)
Photo Credit X
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು 10 ವರ್ಷಗಳ ಹಿಂದೆ ಕಂಪೋಸ್ ಮಾಡಿದ್ದ ಹೂವಿನ ಬಾಣದಂತೆ ಹಾಡು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಕಾರಣ ಹುಡುಗಿ ಹಾಡನ್ನು ಹಾಡಿದ ದಾಡಿ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತು. 

ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರೀ ತನ್ನ ಗೆಳೆಯರ ಜತೆ ಇರುವಾಗ ತಮಾಷೆಗಾಗಿ ಹಾಡಿದ ಹಾಡು ರಾತ್ರಿ ಬೆಳಕಾಗುವುದರೊಳಗೆ ಭಾರೀ ವೈರಲ್ ಆಯಿತು. ಇನ್‌ಸ್ಟಾಗ್ರಾಂನಲ್ಲಿ 150 ಜನ ಫಾಲೋವರ್ಸ್‌ ಅನ್ನು ಹೊಂದಿದ್ದ ನಿತ್ಯಶ್ರೀ ಒಮ್ಮೆಲೇ 40ಸಾವಿರ ಫಾಲೋವರ್ಸ್ ಅನ್ನು ಗಳಿಸುವಂತೆ ಮಾಡಿತು. 

ವೈರಲ್ ಹುಡುಗಿಯ ಹಾಡಿನ ದಾಟಿ ಕೇಳಿ, ಆಕೆಯಾ ರೀತಿಯೇ ಅರ್ಜುನ್ ಜನ್ಯಾ ಕೂಡಾ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ. 

ವೇದಿಕೆಯೊಂದರಲ್ಲಿ ನಾನು 10 ವರ್ಷಗಳ ಹಿಂದೆ ಕಂಪೋಸ್ ಮಾಡಿದ್ದ ಹಾಡು ಇದೀಗ ವೈರಲ್ ಆಗಿದೆ ಅಂತಾ ಹೇಳಿ ನಿತ್ಯಶ್ರೀ ದಾಟಿಯಲ್ಲೇ ಹಾಡನ್ನು ಹಾಡಿದ್ದಾರೆ. ನಿತ್ಯಶ್ರೀ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ‘ಆ ಮಗು ತುಂಬ ಕ್ಯೂಟ್ ಆಗಿ ಎಲ್ಲ ಕಡೆ ಹಾಡುತ್ತಿದ್ದಾಳೆ. ಅವಳ ವಿಡಿಯೋಗಳು ದಿನಕ್ಕೆ 10 ಸಲ ನನಗೆ ಬರುತ್ತಿವೆ. ಎಲ್ಲೇ ಇದ್ದರೂ ಅವಳಿಗೆ ದೇವರು ಆಶೀರ್ವಾದ ಮಾಡಲಿ. ತುಂಬ ಮುಗ್ಧವಾಗಿದ್ದೀಯ ಕಂದ. ಹಾಗೆಯೇ ಇನೋಸೆಂಟ್ ಆಗಿರು. ಒಳ್ಳೆಯದಾಗಲಿ’ ಎಂದು ಅರ್ಜುನ್ ಜನ್ಯ ಆಶೀರ್ವಾದ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ ಚಿತ್ರರಂಗಕ್ಕೆ ವಾಪಾಸ್ಸಾದ ಗೋಲ್ಡನ್ ಕ್ವೀನ್ ಅಮೂಲ್ಯ, ಬರ್ತಡೇ ದಿನ ಅಭಿಮಾನಿಗಳಿಗೆ ಡಬಲ್ ಧಮಾಕ