ಬೆಂಗಳೂರು: ಕಾಂತಾರ ಚಾಪ್ಟರ್ 1 ಹಾಡಿಗೆ ಪಂಜಾಬಿ ಗಾಯಕ ದಿಲ್ಜೀತ್ ಧ್ವನಿ ನೀಡಿದ್ದು, ಇದಕ್ಕೆ ಕನ್ನಡಿಗರು ಗರಂ ಆಗಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಕಾಂತಾರ ಮೊದಲ ಸಿನಿಮಾ ಅಪ್ಪಟ ಕನ್ನಡ ಸಿನಿಮಾವಾಗಿತ್ತು. ಇಲ್ಲಿ ನಟನೆಯಿಂದ ಹಿಡಿದು ಹಾಡಿನವರೆಗೂ ಕನ್ನಡಿಗರೇ ಇದ್ದರು. ಆದರೆ ಈಗ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.
ಈ ಬಾರಿ ಪರಭಾಷೆ ಕಲಾವಿದರೂ ಇದ್ದಾರೆ. ಇವರ ಜೊತೆಗೆ ಈಗ ಹಾಡಿಗೂ ಪರಭಾಷಾ ಗಾಯಕರನ್ನು ಕರೆತರಲಾಗಿದೆ. ಅದರಲ್ಲೂ ಶಿವನ ಹಾಡನ್ನು ದಿಲ್ಜೀತ್ ಬಳಿ ಹಾಡಿಸಲಾಗಿದೆ. ಇದಕ್ಕೆ ಕನ್ನಡಿಗರು ಗರಂ ಆಗಿದ್ದಾರೆ.
ನಿಮಗೆ ಕನ್ನಡಿಗರು ಯಾರೂ ಸಿಕ್ಕಿಲ್ವಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪಂಜಾಬಿ ಗಾಯಕ ಈ ಹಿಂದೆ ಪಾಕಿಸ್ತಾನಿ ಕಲಾವಿದೆಗೆ ಅವಕಾಶ ಕೊಟ್ಟು ವಿವಾದ ಮಾಡಿಕೊಂಡಿದ್ದವರು. ಹಲವು ಬಾರಿ ದಿಲ್ಜೀತ್ ಬೇರೆ ಬೇರೆ ಕಾರಣಕ್ಕೆ ವಿವಾದಕ್ಕೀಡಾದವರು. ಈ ಪವರ್ ಫುಲ್ ಹಾಡು ಹಾಡಲು ಅವರೇ ಬೇಕಿತ್ತಾ ಎಂದು ಕೆಲವರು ಕಿಡಿ ಕಾರಿದ್ದಾರೆ.