Select Your Language

Notifications

webdunia
webdunia
webdunia
webdunia

ಶಿವಾಜಿ ಸಿನಿಮಾದ ಪೋಸ್ಟರ್ ಹಂಚಿಕೊಳ್ಳದ ರಿಷಬ್ ಶೆಟ್ಟಿ, ಮೂಡಿದೆ ಅನುಮಾನ

Rishab Shetty

Krishnaveni K

ಬೆಂಗಳೂರು , ಗುರುವಾರ, 20 ಫೆಬ್ರವರಿ 2025 (09:53 IST)
ಬೆಂಗಳೂರು: ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್ ನ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ನಾಯಕ ನಟನಾಗಿ ಪಾತ್ರ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಪೋಸ್ಟರ್ ನಿನ್ನೆ ಬಿಡುಗಡೆಯಾಗಿದ್ದರೂ ರಿಷಭ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ರಿಷಬ್ ಶೆಟ್ಟಿ ಈ ಮೊದಲು ಶಿವಾಜಿ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಒಂದು ಪೋಸ್ಟರ್ ಹಂಚಿಕೊಂಡಿದ್ದರು. ಆಗ ಸಾಕಷ್ಟು ಜನ ಕನ್ನಡಿಗರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡಿಗರ ವಿರೋಧಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಯಾಕೆ ನಟಿಸುತ್ತಿದ್ದೀರಿ. ಕನ್ನಡದ ಐತಿಹಾಸಿಕ ನಾಯಕರ ಕುರಿತಾಗಿ ಸಿನಿಮಾ ಮಾಡಬಹುದಿತ್ತಲ್ಲವೇ ಎಂದು ಕಿಡಿ ಕಾರಿದ್ದರು.

ಇದಾದ ಬಳಿಕ ಈಗ ನಿನ್ನೆ ಸಿನಿಮಾ ತಂಡದ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು. ಭವಾನಿ ದೇವಿ ವಿಗ್ರಹದ ಮುಂದೆ ಶಿವಾಜಿ ಮಹಾರಾಜನಾಗಿ ರಿಷಬ್ ಶೆಟ್ಟಿ ನಿಂತಿರುವ ಅದ್ಭುತ ಪೋಸ್ಟರ್ ಬಿಡುಗಡೆಯಾಗಿತ್ತು.

ವಿಶೇಷವೆಂದರೆ ಈ ಪೋಸ್ಟರ್ ನ್ನು ರಿಷಬ್ ಇದುವರೆಗೆ ಹಂಚಿಕೊಂಡಿಲ್ಲ. ಹಿಂದೆ ಆಗಿದ್ದ ಟ್ರೋಲ್ ಕಾರಣಕ್ಕೇ ರಿಷಬ್ ಪೋಸ್ಟರ್ ಹಂಚಿಕೊಳ್ಳದೇ ಸುಮ್ಮನಿದ್ದಾರಾ ಎಂಬ ಅನುಮಾನ ಕಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಿಯ ಮುಂದೆ ಛತ್ರಪತಿ ಶಿವಾಜಿಯಾಗಿ ನಿಂತ ರಿಷಭ್ ಶೆಟ್ಟಿ: ಸಿನಿಮಾದ ಫಸ್ಟ್‌ ಲುಕ್ ರಿವೀಲ್‌