Select Your Language

Notifications

webdunia
webdunia
webdunia
webdunia

ದೇವಿಯ ಮುಂದೆ ಛತ್ರಪತಿ ಶಿವಾಜಿಯಾಗಿ ನಿಂತ ರಿಷಭ್ ಶೆಟ್ಟಿ: ಸಿನಿಮಾದ ಫಸ್ಟ್‌ ಲುಕ್ ರಿವೀಲ್‌

 Chhatrapati Shivaji Maharaj First Look, Director Rishabh Shetty,  Shivaji Maharaj's birth anniversary,

Sampriya

ಬೆಂಗಳೂರು , ಬುಧವಾರ, 19 ಫೆಬ್ರವರಿ 2025 (18:58 IST)
Photo Courtesy X
ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರು ಛತ್ರಪತಿಯಾಗಿ ಅಭಿನಯಿಸಲಿರುವ 'ದಿ ಪ್ರೈಡ್ ಆಫ್ ಭಾರತ್‌: ಛತ್ರಪತಿ ಶಿವಾಜಿ ಮಹಾರಾಜ' ಸಿನಿಮಾದ ಫಸ್ಟ್‌ ಲುಕ್‌ ಅನ್ನು ರಿವೀಲ್ ಮಾಡಲಾಗಿದೆ.

ಸಂದೀಪ್ ಸಿಂಗ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಶೌರ್ಯ, ಗೌರವ ಮತ್ತು ಭಾರತದ ಅತ್ಯಂತ ಗೌರವಾನ್ವಿತ ಐತಿಹಾಸಿಕ ವ್ಯಕ್ತಿಗಳ ಗಮನಾರ್ಹ ಪರಂಪರೆಯ ಮಹಾಕಾವ್ಯ ಎಂದು ಬಣ್ಣಿಸಲಾಗಿದೆ.  ಶಿವಾಜಿ ಮಹಾರಾಜರ ಜನ್ಮದಿನದಂದು ಫಸ್ಟ್ ಲುಕ್ ರಿವೀಲ್ ಆಗಿದೆ

ಛತ್ರಪತಿ ಶಿವಾಜಿ ಮಹಾರಾಜರ 395ನೇ ಜನ್ಮದಿನದ ಸಂದರ್ಭದಲ್ಲಿ ದಿ ಪ್ರೈಡ್ ಆಫ್ ಭಾರತ್‌ನ ಫಸ್ಟ್‌ಲುಕ್ ಪೋಸ್ಟರ್‌ಗಳನ್ನು ಬಹಿರಂಗಪಡಿಸಲಾಯಿತು. ಅತ್ಯಾಕರ್ಷಕ ದೃಶ್ಯದಲ್ಲಿ, ರಿಷಬ್ ಶೆಟ್ಟಿ ರಾಜಮನೆತನದ ಉಡುಪಿನಲ್ಲಿ ಅಲಂಕರಿಸಲ್ಪಟ್ಟಿದ್ದು, ದೇವಿಯ ಭವ್ಯವಾದ ವಿಗ್ರಹದ ಮುಂದೆ ನಿಂತಿದ್ದಾರೆ.

ಪೋಸ್ಟರ್‌ ಅನ್ನು ನೋಡಿದಾಗ ಶಕ್ತಿ ಮತ್ತು ಶೌರ್ಯವನ್ನು ತೋರಿಸುತ್ತದೆ. ಈ ಸಿನಿಮಾದಲ್ಲಿ ಶಿವಾಜಿ ಮಹಾರಾಜರ ಅದಮ್ಯ ಚೇತನ ಮತ್ತು ನಾಯಕತ್ವದ ಸಾರವನ್ನು ಸಂಪೂರ್ಣವಾಗಿ ಸೆರೆಹಿಡಿಯಲಿದೆ. ಭಾರತದ ಸಿನಿಮಾ ರಂಗದಲ್ಲಿ ಈ ಸಿನಿಮಾ ಹೊಸ ಮೈಲಿಗಲ್ಲನ್ನು ಸೃಷ್ಟಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.

ಈಗಾಗಲೇ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್‌ ಆಗಿದೆ. 2027ರ ಜನವರಿ 21ಕ್ಕೆ ಈ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಅನೌನ್ಸ್‌ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಲವಿನ ಡ್ರೋನ್ ಹಾರಿಸಲು ಭರ್ಜರಿ ಬ್ಯಾಚುಲರ್ಸ್‌ಗೆ ಎಂಟ್ರಿಕೊಟ್ಟ ಪ್ರತಾಪ್‌