Select Your Language

Notifications

webdunia
webdunia
webdunia
webdunia

ಮದುವೆಯಾದ ಕೆಲವೇ ತಿಂಗಳೊಳಗೆ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ ಯೂಟ್ಯೂಬರ್ ಮಧು, ನಿಖಿಲ್ ದಂಪತಿ

ಮದುವೆಯಾದ ಕೆಲವೇ ತಿಂಗಳೊಳಗೆ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ ಯೂಟ್ಯೂಬರ್ ಮಧು, ನಿಖಿಲ್ ದಂಪತಿ

Sampriya

ಬೆಂಗಳೂರು , ಬುಧವಾರ, 19 ಫೆಬ್ರವರಿ 2025 (14:27 IST)
Photo Courtesy X
ರೀಲ್ಸ್‌ ಹಾಗೂ ಯೂಟ್ಯೂಬ್‌ ಚಾನೆಲ್‌ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳಾದ ಮಧು ಹಾಗೂ ನಿಖಿಲ್ ಅವರು ಯಾವ ಸೆಲೆಬ್ರಿಟಿ ಮದುವೆಗೂ ಕಮ್ಮಿ ಇಲ್ಲದಂತೆ ಈಚೆಗೆ  ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆಯಾದ ಕೆಲವೇ ತಿಂಗಳೊಳಗೆ ತಮ್ಮ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ.  ಮಧು ಗೌಡ ಹಾಗೂ ನಿಖಿಲ್ ರವಿಂದ್ರ ಅವರು ಇದೀಗ ದುಬಾರಿ ಹೊಚ್ಚ ಹೊಸ 5 ಡೋರ್‌ನ ಮಹೀಂಧ್ರ ಥಾರ್‌ ಅನ್ನು ಖರೀದಿ ಮಾಡಿದ್ದಾರೆ.

ಇದರ ವಿಡಿಯೋ ಹಾಗೂ ಪೋಟೋಗಳನ್ನು  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ತಮ್ಮ ಕನಸ್ಸು ನನಸು ಮಾಡಿದ ಖುಷಿಯಲ್ಲಿ ಮಧು ಗೌಡ ಅವರು ಕಣ್ಣೀರು ಹಾಕಿದ್ದಾರೆ. ಇದು ಖುಷಿಯ ಕಣ್ಣೀರು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ನಿಖಿಲ್ ಅವರ ಸಹೋದರಿ ನಿಶಾ ಕೂಡಾ ಮಧು ಜತೆ ರೀಲ್ಸ್‌ ಹಾಗೂ ವಿಡಿಯೋ ಮಾಡುತ್ತಿದ್ದಾರೆ. ಇವರ ಮೂವರು ತಮ್ಮ ಯೂಟ್ಯೂಬ್ ಮೂಲಕ ಜನರಿಗೆ ಮನರಂಜನೆ ನೀಡುತ್ತಾ ಇದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದಶಕದ ಹಿಂದೆ ಗೇಟ್‌ ಪಡೆದಿದ್ದ ಚಿತ್ರ ರೀ ರಿಲೀಸ್‌: ಅಭಿಮಾನಕ್ಕೆ ಧನ್ಯ ಎಂದ ಹರ್ಷವರ್ಧನ್‌ ರಾಣೆ