Select Your Language

Notifications

webdunia
webdunia
webdunia
webdunia

ಖ್ಯಾತ ನಟ ಮೋಹನ್ ಬಾಬು ಪುತ್ರ ಮಂಚು ಮನೋಜ್ ಬಂಧನ, ಕಾರಣ ಹೀಗಿದೆ

Mohan Babu Son, Manchu Manoj Arrest, Family Dispute Case

Sampriya

ಆಂಧ್ರಪ್ರದೇಶ , ಮಂಗಳವಾರ, 18 ಫೆಬ್ರವರಿ 2025 (19:16 IST)
Photo Courtesy X
ಆಂಧ್ರಪ್ರದೇಶ: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ ಮಂಚು ಮನೋಜ್ ಅವರನ್ನು ತಿರುಪತಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ನಂತರ ಬಂಧನವಾಗಿದೆ. ಇದೀಗ ಪೊಲೀಸರು ನಟನನ್ನು ವಶಕ್ಕೆ ಪಡೆದಿದ್ದಾರೆ. ವರದಿಗಳ ಪ್ರಕಾರ, ಮನೋಜ್ ಅವರನ್ನು ತಿರುಪತಿಯ ಅವರ ನಿವಾಸದಿಂದ ಬಂಧಿಸಿ ಭಾಕರಪೇಟೆ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ.

ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಮೋಹನ್ ಬಾಬು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.

ಕಳೆದ ಒಂದು ದಿನದ ಹಿಂದೆ ಮನೋಜ್ ಅವರು ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದಲ್ಲಿ ಜಲ್ಲಿಕಟ್ಟು
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅವರ ಆಗಮನವನ್ನು ಟಿಡಿಪಿ, ಜನಸೇನಾ ಹಾಗೂ ಎನ್‌ಟಿಆರ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ಸಂದರ್ಭದಲ್ಲಿ ಮನೋಜ್ ತಮ್ಮ ರಾಜಕೀಯ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ್ದರು. ಅದಕ್ಕೂ ಮುನ್ನ ರೇಣಿಗುಂಟಾ ವಿಮಾನ ನಿಲ್ದಾಣದಲ್ಲಿ ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಅವರನ್ನೂ ಮನೋಜ್ ಭೇಟಿ ಮಾಡಿದ್ದರು.

ಕಳೆದ ವರ್ಷ, ಹಿರಿಯ ನಟ ಮೋಹನ್ ಬಾಬು ಮತ್ತು ಅವರ ಕಿರಿಯ ಮಗ ಮಂಚು ಮನೋಜ್ ಒಳಗೊಂಡ ಕೌಟುಂಬಿಕ ಕಲಹ ಸುದ್ದಿ ಮಾಡಿತ್ತು. ಹೈದರಾಬಾದ್‌ನ ಜಲಪಲ್ಲಿಯಲ್ಲಿರುವ ತನ್ನ ಮನೆಯನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮೋಹನ್ ಬಾಬು ಅವರು ಮನೋಜ್ ಮತ್ತು ಅವರ ಪತ್ನಿ ಮೌನಿಕಾ ವಿರುದ್ಧ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗೆ ನುಗ್ಗಿ ಹಾನಿ ಮಾಡಿದ್ದಾರೆ ಎಂದು ಮನೋಜ್ ಆರೋಪಿಸಿದ್ದಾರೆ.

ಖ್ಯಾತ ತೆಲುಗು ನಟ ಮತ್ತು ನಿರ್ಮಾಪಕ ಮೋಹನ್ ಬಾಬು ಅವರಿಗೆ ಮೂವರು ಮಕ್ಕಳಿದ್ದಾರೆ: ಮಂಚು ವಿಷ್ಣು, ಮಂಚು ಲಕ್ಷ್ಮಿ ಮತ್ತು ಮಂಚು ಮನೋಜ್. ವಿಷ್ಣು ಮತ್ತು ಲಕ್ಷ್ಮಿ ಅವರ ಮೊದಲ ಪತ್ನಿ ವಿದ್ಯಾದೇವಿಯ ಮಕ್ಕಳು.  ಮನೋಜ್ ವಿದ್ಯಾಳ ತಂಗಿ ನಿರ್ಮಲಾ ದೇವಿಯ ಮಗ.

Share this Story:

Follow Webdunia kannada

ಮುಂದಿನ ಸುದ್ದಿ

ಕಷ್ಟದಲ್ಲಿದ್ದಾಗ ಬೆಂಬಲವಾಗಿ ನಿಂತ ನಿಷ್ಕಲ್ಮಶ ಹೃದಯಗಳಿಗೆ ಚಿರಋಣಿ: ನಿಮ್ಮ ದಾಸ ದರ್ಶನ್