Select Your Language

Notifications

webdunia
webdunia
webdunia
webdunia

ಮಗನ ವಿರುದ್ಧವೇ ಠಾಣೆ ಮೆಟ್ಟಿಲೇರಿದ ನಟ ಮೋಹನ್ ಬಾಬು, ಪ್ರತಿದೂರು ದಾಖಲಿಸಿದ ಪುತ್ರ

ಮಗನ ವಿರುದ್ಧವೇ ಠಾಣೆ ಮೆಟ್ಟಿಲೇರಿದ ನಟ ಮೋಹನ್ ಬಾಬು, ಪ್ರತಿದೂರು ದಾಖಲಿಸಿದ ಪುತ್ರ

Sampriya

ಬೆಂಗಳೂರು , ಮಂಗಳವಾರ, 10 ಡಿಸೆಂಬರ್ 2024 (18:04 IST)
ಬೆಂಗಳೂರು: ಹಿರಿಯ ನಟ ಮೋಹನ್ ಬಾಬು ತಮ್ಮ ಪುತ್ರ ಮನೋಜ್ ಮಂಚು ಮತ್ತು ಸೊಸೆ ಮೋನಿಕಾ ವಿರುದ್ಧ ದೂರು ದಾಖಲಿಸಿದ್ದಾರೆ.

ತೆಲುಗು ಹಿರಿಯ ನಟ 78 ವರ್ಷದ ಮೋಹನ್ ಬಾಬು ಅವರು ಡಿಸೆಂಬರ್ 9 ರಂದು ತಮ್ಮ ಮಗ ಮನೋಜ್ ಮಂಚು ಮತ್ತು ಸೊಸೆ ಮೋನಿಕಾ ವಿರುದ್ಧ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.

ರಾಚಕೊಂಡ ಪೊಲೀಸರಿಗೆ ನೀಡಿದ ದೂರಿನಲ್ಲಿ, ಮನೋಜ್ ಮಾದಾಪುರದಲ್ಲಿರುವ ತನ್ನ ಕಚೇರಿಯಲ್ಲಿದ್ದಾಗ ತನ್ನ ಜಾಲಪಲ್ಲಿ ಮನೆಗೆ ಅತಿಕ್ರಮವಾಗಿ ನುಗ್ಗಿ, ತನ್ನ ಮಗ ಮತ್ತು ಸೊಸೆ ತನ್ನ ಮನೆಯನ್ನು ಆಕ್ರಮಿಸಿಕೊಂಡಿದ್ದು, ಅವರನ್ನು ಹೊರಹಾಕುವಂತೆ ದೂರು ದಾಖಲಿಸಿದ್ದಾರೆ.

ಇನ್ನು ತಮ್ಮ ತಂದೆಯ ವಿರುದ್ಧ ನಟ ಮನೋಜ್ ಕೂಡ ಪ್ರತಿದೂರು ದಾಖಲಿಸಿದ್ದು, ಭಾನುವಾರ 10 ಮಂದಿ ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗೆ ನುಗ್ಗಿ ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ಹಿಡಿಯಲು ಮುಂದಾದಾಗ ಪರಸ್ಪರ ಹೊಡೆದಾಟ ಸಂಭವಿಸಿದೆ.

ಹಿರಿಯ ಪುತ್ರ ಮಂಚು ಮನೋಜ್ ಕಡೆಯವರು ಮನೆಗೆ ನುಗ್ಗಿ ನನ್ನ ಮೇಲೆ, ನನ್ನ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆಯತ್ನಿಸಿದ್ದರು. ಹೀಗಾಗಿ ನನ್ನ ಪತ್ನಿ ಮತ್ತು ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಪಹಾಡಿಶರೀಫ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೋಹನ್ ಬಾಬು ಅವರು ರಾಚಕೊಂಡ ಪೊಲೀಸ್ ಕಮಿಷನರ್ ಅವರಿಗೆ ನೀಡಿದ ದೂರಿನಲ್ಲಿ ಮನೋಜ್ ಮತ್ತು ಅವರು ನೇಮಿಸಿದ ಕೆಲವು ಸಮಾಜ ವಿರೋಧಿ ಶಕ್ತಿಗಳು ಭಾನುವಾರ ತಮ್ಮ ನಿವಾಸದಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 30 ವ್ಯಕ್ತಿಗಳು ನಿವಾಸಕ್ಕೆ ಅತಿಕ್ರಮವಾಗಿ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಆವರಣದಿಂದ ಹೊರಹಾಕಿದ್ದಾರೆ.

ಈ ವ್ಯಕ್ತಿಗಳು ಮನೋಜ್ ಮತ್ತು ಅವರ ಪತ್ನಿಯ ಸೂಚನೆಯಂತೆ ನಡೆದುಕೊಂಡು ನಮ್ಮ ಮನೆಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ. ಮನೋಜ್, ಅವರ ಪತ್ನಿ ಹಾಗೂ ಅವರ ಸಹಚರರ ವಿರುದ್ಧ ಕ್ರಮ ಕೈಗೊಂಡು ಮನೆಯಿಂದ ಹೊರಹಾಕುವಂತೆ ಮೋಹನ್ ಬಾಬು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಅಂತೆಯೇ ಕುಟುಂಬಸ್ಥರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಯವಿಲ್ಲದೆ ಅವರ ಮನೆಗೆ ಪ್ರವೇಶಿಸಲು ಪೊಲೀಸ್ ರಕ್ಷಣೆ ನೀಡಬೇಕು ಎಂದು ಮೋಹನ್ ಬಾಬು ಕೋರಿದ್ದಾರೆ.

ದೂರಿನಲ್ಲಿ ತನಗೆ, ತನ್ನ ಹೆಂಡತಿ ಮತ್ತು ಮಕ್ಕಳಿಗೆ ರಕ್ಷಣೆ ನೀಡಲು ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮನೆಗೆ ಅಕ್ರಮವಾಗಿ ಪ್ರವೇಶಿಸಿದವರ ಗುರುತು ಪತ್ತೆ ಹಚ್ಚಲು ತನಿಖೆ ನಡೆಸಬೇಕು ಎಂದು ಮನೋಜ್ ಮನವಿ ಮಾಡಿದ್ದಾರೆ.

ಇನ್ನು ಪರಸ್ಪರರ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, 'ದೂರು ಆಧರಿಸಿ ಎರಡು ಪ್ರಕರಣಗಳನ್ನು ದಾಖಲಿಸಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿ ಕೆಲ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಂಚನೆ ಪ್ರಕರಣ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರಗೆ ಸಮನ್ಸ್‌