ಸಿನಿಮಾ ಶೂಟಿಂಗ್‌ನಿಂದ ಬ್ರೇಕ್ ಪಡೆದ ನಟ ಧ್ರುವ ಸರ್ಜಾ ಅವರು ಬೆಂಗಳೂರಿನ ಗೋಶಾಲೆಗೆ ಫ್ಯಾಮಿಲಿ ಸಮೇತ ಭೇಟಿ ನೀಡಿದ್ದಾರೆ. ಗೋಶಾಲೆಯಲ್ಲಿ ಫ್ಯಾಮಿಲಿ ಜೊತೆ ಧ್ರುವ ಕಾಲ ಕಳೆದಿದ್ದಾರೆ.
ಗೋವುಗಳಿಗೆ ಮೇವು ತಿನಿಸಿ ಸಂಭ್ರಮಿಸಿದ್ದಾರೆ. ಇನ್ನೂ ಗೋಶಾಲೆಯ ಸೇವೆಗೆ ಧ್ರುವ ಸರ್ಜಾ ಕೈ ಜೋಡಿಸಿದ್ದಾರೆ. ತಿಂಗಳಿಗೆ ಎರಡು ಬಾರಿ ಗೋಶಾಲೆಗೆ ಧ್ರುವ ಕುಟುಂಬದ ಸದಸ್ಯರು ಭೇಟಿ ಕೊಡುತ್ತಾರೆ.
2004ರ ಅಕ್ಟೋಬರ್ 11ರಂದು ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಅಂದಹಾಗೆ, `ಮಾರ್ಟಿನ್' ರಿಲೀಸ್ ಬಳಿಕ ಡೈರೆಕ್ಟರ್ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಧ್ರುವಗೆ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ.
ಧ್ರುವ ಸರ್ಜಾ ಅವರು 'ಮಾರ್ಟಿನ್' ಮತ್ತು 'ಕೆಡಿ' ಸಿನಿಮಾವನ್ನು ಮುಗಿಸಿಕೊಟ್ಟಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಬಾಕಿಯುಳಿದಿರುವ ಕೆಲಸಗಳು ನಡೆಯುತ್ತಿದೆ. ಎಲ್ಲಾ ಕೆಲಸ ಪಕ್ಕಾ ಆದ್ಮೇಲೆ ಚಿತ್ರಮಂದಿರದಲ್ಲಿ ಸಿನಿಮಾ ಅಬ್ಬರಿಸಲಿದೆ. ಈ ಚಿತ್ರದಲ್ಲಿ ಮಲ್ಟಿಸ್ಟಾರ್ಸ್ ನಟಿಸಿದ್ದಾರೆ. ಧ್ರುವ ಸರ್ಜಾ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಅನೇಕರು ನಟಿಸಿದ್ದಾರೆ.