Select Your Language

Notifications

webdunia
webdunia
webdunia
webdunia

ಹೊಸ ರೆಕಾರ್ಡ್‌ ಸೃಷ್ಟಿಸುತ್ತದೆ ಎಂದಿದ್ದ ಮಾರ್ಟಿನ್‌ ಮೂರು ದಿನದ ಕಲೆಕ್ಷನ್ ಎಷ್ಟು

Martin Movie Review, Martin Cinema Collection, Actor Dhruva Sarja

Sampriya

ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2024 (19:28 IST)
Photo Courtesy X
ಬೆಂಗಳೂರು: ಅಕ್ಟೋಬರ್ 11ರಂದು ಬಿಡುಗಡೆಯಾದ ಆ್ಯಕ್ಷನ್ ಫ್ರಿನ್ಸ್‌ ನಟ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಅಂದುಕೊಂಡಷ್ಟು ಸದ್ದು ಮಾಡುತ್ತಿಲ್ಲ. ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಅಭಿನಯದ ಸಿನಿಮಾ ಇದಾಗಿದ್ದು, ಬಿಡುಗಡೆಗೂ ಮುನ್ನಾ ಬಾರೀ ನಿರೀಕ್ಷೆಯನ್ನು ಮೂಡಿಸಿತ್ತು.

ಆದರೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಾರ್ಟಿನ್ ಸಿನಿಮಾಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಬೇಸರ ವ್ಯಕ್ತಪಡಿಸಿದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದು, ಉದಯ್ ಕೆ.ಮೆಹ್ತಾ, ಸೂರಜ್ ಉದಯ್ ಮೆಹ್ತಾ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

120ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾದ ಸಿನಿಮಾದ ಕಳೆದ ಮೂರು ದಿನದಲ್ಲಿ 18ಕೋಟಿ ಬಾಚಿಕೊಂಡಿದೆ.  ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಿದ್ದ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಯಿತ್ತು. ಕೆಜಿಎಫ್ ಬಳಿಕ ಕನ್ನಡ ಮತ್ತೊಂದು ಸಿನಿಮಾ ವಿಶ್ವವನ್ನೇ ಮೆಚ್ಚುವಂತೆ ಮಾಡುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಸಿನಿಮಾ ನಿರಾಸೆ ಮೂಡಿಸಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ಗೆ ಮಾನಸಿಕ ನೆಮ್ಮದಿಯಿಲ್ಲ, ಬೇಲ್ ಸಿಗೋದಿಲ್ಲ: ಜ್ಯೋತಿಷ್ಯ ಏನು ಹೇಳುತ್ತಿದೆ