Select Your Language

Notifications

webdunia
webdunia
webdunia
webdunia

ಕಾಂತಾರ ಪ್ರೀಕ್ವೆಲ್‌ನಲ್ಲಿ ರಿಷಭ್‌ ತಂದೆ ಪಾತ್ರಕ್ಕೆ ಜೀವತುಂಬಲಿರುವ ಮೇರುನಟ ಯಾರು

Actor, Director Rishabh Shetty

Sampriya

ಬೆಂಗಳೂರು , ಮಂಗಳವಾರ, 1 ಅಕ್ಟೋಬರ್ 2024 (14:50 IST)
Photo Courtesy X
ಬೆಂಗಳೂರು: ಕಾಂತಾರ ಸಿನಿಮಾದ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿದ ರಿಷಭ್‌ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್-1ರಲ್ಲಿ ಬ್ಯುಸಿಯಾಗಿದ್ದಾರೆ.

ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡ ಕಾಂತಾರ ಸಿನಿಮಾ ಅದ್ಭುತ ಯಶಸ್ಸಿನ ಬಳಿಕ ಇತರೆ ಭಾಷೆಗೆ ಡಬ್‌ ಆಗಿ ತೆರೆಕಂಡಿತ್ತು. ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ 400 ಕೋಟಿ ಗಳಿಕೆ ಕಾಣುವುದರ ಜತೆ ರಿಷಭ್‌ ಶೆಟ್ಟಿ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ತಂದುಕೊಟ್ಟಿತು.

ಕಾಂತಾರ ಪ್ರೀಕ್ವೆಲ್‌ ಸಿನಿಮಾಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಮುಹೂರ್ತದ ಬಳಿಕ ಸಿನಿಮಾ ತಂಡದಿಂದ ಯಾವ ಮಹತ್ವದ ಅಪ್ಡೇಟ್ ಕೂಡ ಹೊರಬಿದ್ದಿಲ್ಲ. ‌ಆದರೂ ಆಗಾಗ ಸಿನಿಮಾದ ಪಾತ್ರವರ್ಗ ಬಗ್ಗೆ ಸುದ್ದಿ ಹರಿದಾಡುತ್ತಲೇ ಇರುತ್ತದೆ.

ಚಿತ್ರದಲ್ಲಿ ಮಲಯಾಳಂನ ಮೇರುನಟ ಮೋಹನ್‌ ಲಾಲ್‌ ಅವರು ʼಕಾಂತಾರ-1ʼ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅವರು ಸಿನಿಮಾದಲ್ಲಿ ರಿಷಭ್‌ ಶೆಟ್ಟಿ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈಗಾಗಲೇ ಚಿತ್ರತಂಡ ತಂಡವು ಜೂನಿಯರ್ ಆರ್ಟಿಸ್ಟ್‌ಗಳಿಗೆ ಆಡಿಷನ್‌ಗಳನ್ನು ನಡೆಸಿದೆ. ಪ್ರಮುಖ ಪಾತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಕಾಂತಾರ ಪ್ರೀಕ್ವೆಲ್‌ ಚಿತ್ರವೂ ಭೂತಾರಾಧನೆಯ ವಿಷಯ ವಸ್ತುವಿನ ಆಧಾರದಲ್ಲಿ ಇರಲಿದೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ: ಗುಂಡೇಟು ತಗಲಿದ ನಟ ಗೋವಿಂದ ಪ್ರತಿಕ್ರಿಯೆ