Select Your Language

Notifications

webdunia
webdunia
webdunia
webdunia

‘ಪುಪ್ಪಾ 2‘ ಟೀಸರ್‌ ನೋಡಿ ಫಿದಾ ಆದ ರಿಷಬ್ ಶೆಟ್ಟಿ

Actor Director Rishabh Shetty
Photo Courtesy X
ಬೆಂಗಳೂರು:  ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ನಿರ್ದೇಶಕ ಹಾಗೂ ನಟ. ಕಾಂತಾರ ಸಿನಿಮಾದ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಇವರು ಇದೀಗ  'ಕಾಂತಾರ: ಅಧ್ಯಾಯ 1' ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ರಿಷಬ್ ಶೆಟ್ಟಿ ಅವರು ಹೊಸಬರ ಚಿತ್ರಗಳಿಗೆ ಬೆಂಬಲ ನೀಡುತ್ತಾ, ಉತ್ತಮ ಸಿನಿಮಾ ಹಾಗೂ ಟೀಸರ್‌ಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ದೂರ ಉಳಿಯುವುದಿಲ್ಲ. ಇದೀಗ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ 2: ದಿ ರೂಲ್' ಟೀಸರ್ ನೋಡಿ ಫಿದಾ ಆಗಿದ್ದು, ಈ ಬಗ್ಗೆ ಚಿತ್ರಂಡಕ್ಕೆ ಶುಭಾಶಯವನ್ನು ತಿಳಿಸಿದ್ದಾರೆ.

ಪುಷ್ಪಾ 2 ಟೀಸರ್ ನೋಡಲು ಅದ್ಭುತವಾಗಿದೆ. ಚಿತ್ರತಂಡಕ್ಕೆ ಪ್ರೀತಿಯ  ಶುಭಹಾರೈಕೆ ಎಂದು ಬರೆದಿದ್ದಾರೆ.

ಇಂದು ಬಿಡುಗಡೆಯಾಗಿರುವ ಪುಷ್ಪಾ 2 ಟೀಸರ್ ಹೊಸ ಟ್ರೆಂಡ್ ಸೆಟ್ ಮಾಡಿದೆ. ಇನ್ನು ಅಲ್ಲು ಅರ್ಜುನ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಹೊಸ ಹವಾ ಸೆಟ್ ಮಾಡಿದೆ. ಅಭಿಮಾನಿಗಳು ನಿರೀಕ್ಷಿಸಿದಂತೆ ಚಿತ್ರತಂಡ ಮಸ್ತ್ ಆಗಿರುವ ಟೀಸರ್ ಒಂದನ್ನು ಕೈಬಿಟ್ಟಿದ್ದು ಭಾರೀ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದೆ

ಇನ್ನು ನಟ ರಿಷಬ್ ಶೆಟ್ಟಿ ಅವರು ಬಹುನಿರೀಕ್ಷಿತ ಸಿನಿಮಾ ಕಾಂತಾರ ಅಧ್ಯಾಯ 1ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀನಾ ತೂಗುದೀಪ ಫೋಟೋ ವಿರೂಪ ಮಾಡಿ ಪೋಸ್ಟ್, ಆರೋಪಿಗೆ ಶಿಕ್ಷೆಯಾಗಲಿ ಎಂದ ಬಿಗ್‌ಬಾಸ್‌ ಪ್ರಥಮ್