Publish Date: Tue, 28 Nov 2023 (11:21 IST)
Updated Date: Tue, 28 Nov 2023 (11:25 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಅಧ್ಯಾಯ 1 ರ ಫಸ್ಟ್ ಲುಕ್ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ದೇಶದಾದ್ಯಂತ ಸಿನಿ ಪ್ರೇಮಿಗಳಲ್ಲಿ ಸಂಚಲನ ಮೂಡಿಸಿದೆ.
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಅಭಿಮಾನಿಗಳು ಕಾಂತಾರ 1 ರ ರಿಷಬ್ ಫಸ್ಟ ಲುಕ್ ಮತ್ತು ಪುಷ್ಪ 2 ರಲ್ಲಿ ಅಲ್ಲು ಅರ್ಜುನ್ ಫಸ್ಟ್ ಲುಕ್ ಫೋಟೋಗಳನ್ನು ಹೋಲಿಕೆ ಮಾಡಿ ನಿಮಗೆ ಯಾವುದು ಬೆಸ್ಟ್ ಎನಿಸುತ್ತಿದೆ ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ.
ರಿಷಬ್ ಫಸ್ಟ್ ಲುಕ್ ನಲ್ಲಿ ಖಡ್ಗ ಹಿಡಿದು ರಕ್ತ ಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ತ ಅಲ್ಲು ಅರ್ಜುನ್ ಪುಷ್ಪ 2 ಫಸ್ಟ್ ಲುಕ್ ನಲ್ಲೂ ವಿಚಿತ್ರ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಪೈಕಿ ಯಾರು ಹೆಚ್ಚು ಭೀಭತ್ಸ, ಯಾವ ಲುಕ್ ಹೆಚ್ಚು ಎಕ್ಸೈಟಿಂಗ್ ಎನಿಸುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರುವಾಗಿದೆ. ಎರಡೂ ಮುಂದಿನ ವರ್ಷ ತೆರೆ ಕಾಣಲಿರುವ ಮಹತ್ವಾಕಾಂಕ್ಷಿ ಸಿನಿಮಾಗಳು. ಮೂಲ ಭಾಷೆ ಬೇರೆಯೇ ಆದರೂ ಎರಡೂ 1000 ಕೋಟಿ ಗಳಿಕೆ ಮಾಡಬಲ್ಲ ಸಾಮರ್ಥ್ಯವಿರುವ ಸಿನಿಮಾಗಳಾಗಿವೆ.